ಬೆಂಗಳೂರು: ಬಿಜೆಪಿ ಬರಿ ಧ್ವೇಷದ ರಾಜಕಾರಣ ಮಾಡುತ್ತಿದೆ. ಇದು ಆರ್ ಎಸ್ ಎಸ್ ಹಿಡನ್ ಅಜೆಂಡಾ. ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಜೈಲು ವಾಸ ಅನುಭವಿಸಿದರು. ಆದರೆ ಅವರ ಬಗ್ಗೆ ರಾಜ್ಯ ಸರ್ಕಾರ ಪ್ರಕಟಿಸುತ್ತಿಲ್ಲ. ಇದು ದೇಶದ ಮೊದಲ ಪ್ರಧಾನಿಗೆ ಮಾಡಿದ ಅವಮಾನ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಹೀಗಂತ ಸಾವರ್ಕರ್ ಬ್ರಿಟೀಷರಿಗೆ ಮುಚ್ಚಳಿಕೆ ಬರೆದುಕೊಟ್ಟರು. ಇಂತವರಿಗೆ ಬಿಜೆಪಿ ಮರ್ಯಾದೆ ಕೊಡುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, ಆರ್ ಎಸ್ ಎಸ್ ಪಾತ್ರವೇನು? ಸಿಎಂ ಬೊಮ್ಮಾಯಿ, ಈಶ್ವರಪ್ಪ, ರವಿಕುಮಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರಾ? ಇವರಿಗೆ ಇತಿಹಾಸ ಗೊತ್ತಿಲ್ಲ. ಕೇವಲ ಇತಿಹಾಸ ತಿರುಚುವುದು ಮಾತ್ರ ಗೊತ್ತು ಎಂದು ಕಿಡಿಕಾರಿದರು.
ಬಿಜೆಪಿ ನಾಯಕರಿಗೆ ನೆಹರು ಇತಿಹಾಸ ಗೊತ್ತಾ? ಆಧುನಿಕ ಭಾರತ ಕಟ್ಟಲು ಪ್ರಯತ್ನ ಮಾಡಿದವರು ನೆಹರು. ದೇಶ ಇಬ್ಭಾಗ ಮಾಡಿದ್ದು ನೆಹರು ಎಂದು ಬಿಜೆಪಿ ಆರೋಪಿಸುತ್ತಿದೆ. ಇತಿಹಾಸ ಗೊತ್ತಿದ್ದರೆ ಹೀಗೆ ಮಾತನಾಡಲ್ಲ. ದೇಶ ಇಬ್ಭಾಗ ಮಾಡಿದ್ದು ಮಹಮ್ಮದ್ ಅಲಿ ಜಿನ್ನಾ, ಮೌಂಟ್ ಬ್ಯಾಟನ್. ಜಿನ್ನಾ ಮುಸ್ಲಿಂ ಲೀಗ್ ಮಾಡಿಕೊಂಡು ಪ್ರತ್ಯೇಕ ದೇಶ ಕೇಳಿದರು. ಅದಕ್ಕೆ ಮೌಂಟ್ ಬ್ಯಾಟನ್ ಅಪ್ರೂವ್ ಮಾಡಿದರು. ಹೀಗಿರುವಾಗ ನೆಹರು ದೇಶ ಒಡೆಯಲು ಹೇಗೆ ಕಾರಣರಾಗುತ್ತಾರೆ ಎಂದು ಪ್ರಶ್ನಿಸಿದರು.