ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯ 161ನೇ ಜಯಂತಿ ಕಾರ್ಯಕ್ರಮದ ವೇಳೆ ಸ್ವಾಗತ ಭಾಷಣ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಗರಂ ಆದ ಘಟನೆ ನಡೆದಿದೆ.
ಸರ್ ಎಂ. ವಿಶ್ವೇಶ್ವರಯ್ಯ 161ನೇ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ತಕ್ಷಣ ಮುಗಿಸದೇ 10 ನಿಮಿಷಗಳ ಕಾಲ ಅನಗತ್ಯ ಮಾತನಾಡುತ್ತಿರುವುದನ್ನು ಕಂಡು ಗರಂ ಆದ ಸಿಎಂ ಬೊಮ್ಮಾಯಿ ಕಾರ್ಯಕ್ರಮದ ಆಯೋಜಕರಿಗೆ ಭಾಷಣದ ಆರಂಭದಲ್ಲೇ ಸಮಯಕ್ಕೆ ಮಹತ್ವವನ್ನು ಕೊಡಬೇಕು ಎಂದು ಹೇಳುವ ಮೂಲಕ ಚಾಟಿ ಬೀಸಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಡಬಲ್ ಸವಾರಿಯ ಮೊದಲ ಇವಿ ಬೈಸಿಕಲ್ ಮಾರುಕಟ್ಟೆಗೆ
ಸರ್ ಎಂ. ವಿಶ್ವೇಶ್ವರಯ್ಯನವರು ಸಮಯಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದರು. ಹಾಗೆಯೇ ನಾವು ಕೂಡ ಸಮಯಕ್ಕೆ ಮಹತ್ವ ಕೊಡುವುದನ್ನು ಕಲಿಯಬೇಕು. ಕೆಲ ದೇಶಗಳಲ್ಲಿ ಇಡೀ ಕಾರ್ಯಕ್ರಮ ಮುಕ್ಕಾಲು ಗಂಟೆಗಳಲ್ಲಿ ಮುಗಿಯುತ್ತೆ. ಆದರೆ ನಮ್ಮಲ್ಲಿ ಇದ್ದವರು ಇಲ್ಲದವರನ್ನು ಸ್ವಾಗತ ಮಾಡುತ್ತಾ ಇರುತ್ತಾರೆ. ಇದು ಸ್ವಲ್ಪ ಬದಲಾವಣೆಯಾಗಬೇಕು ಅನಿಸುತ್ತದೆ ಎಂದರು.
ಇದೇ ವೇಳೆ ಸರ್ ಎಂ ವಿಶ್ವೇಶ್ವರಯ್ಯನವರು ಶ್ರಮಜೀವಿಗಳು. ಸಮಯಕ್ಕೆ ಮಹತ್ವ ನೀಡುತ್ತಿದ್ದರು. 161 ವರ್ಷಗಳಾದರೂ ಅವರ ಸಾಧನೆ ನೆನಪಿಸಿಕೊಳ್ಳುತ್ತೇವೆ. ಈ ರಾಜ್ಯಕ್ಕೆ ಮತ್ತೊಮ್ಮೆ ಸರ್ ಎಂ ವಿಶ್ವೇಶ್ವರಯ್ಯನವರು ಬೇಕಾಗಿದ್ದಾರೆ. ನಮ್ಮ ಸ್ವಂತ ಮನೆ ಕಟ್ಟುವಾಗ ಗುಣಮಟ್ಟ ನೋಡುತ್ತೇವೆ. ಅದೇ ಗುಣಮಟ್ಟ ಸರ್ಕಾರಿ ಕೆಲಸದಲ್ಲಿಯೂ ಕಾಯ್ದುಕೊಳ್ಳಬೇಕು ಎಂದು ಬೊಮ್ಮಾಯಿ ತಿಳಿಸಿದರು.