ಬೆಂಗಳೂರು: ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ. ಸ್ವಚ್ಛ, ಸುಂದರ, ಗುಂಡಿ ಮುಕ್ತ ಬೆಂಗಳೂರನ್ನಾಗಿ ಮಾಡುತ್ತೇವೆ ಎಂದು ನೂತನ ಶಾಸಕ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಯಾವುದೇ ಖಾತೆಗಾಗಿ ನಾನು ಬೇಡಿಕೆ ಇಟ್ಟಿಲ್ಲ, ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.
ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ಮಾಡುತ್ತೇವೆ. ಬೆಂಗಳೂರು ಬ್ರ್ಯಾಂಡ್ ವಾಪಸ್ ತರುತ್ತೇವೆ ಎಂದು ಹೇಳಿದರು.