ಬೆಂಗಳೂರು: ಚಿತ್ರರಂಗಕ್ಕೂ, ರಾಜಕೀಯಕ್ಕೂ ಮೊದಲಿನಿಂದಲು ನಂಟು. ರಾಜಕೀಯದಲ್ಲಿದ್ದವರು ಸಿನಿಮಾದಲ್ಲಿ, ಸಿನಿಮಾ ರಂಗದವರು ರಾಜಕೀಯಕ್ಕೆ ಬರುವುದು ಸಹಜ. ಇದೀಗ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು, ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿದ್ದಾರೆ ಎಂಬುದು ವಿಶೇಷ.
ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಹರೀಶ್ ಎಂ.ಡಿ. ಅವರ ತನುಜಾ ಎಂಬ ಚಿತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ಅಭಿನಯಿಸುತ್ತಿದ್ದು, ಚಿತ್ರೀಕರಣದಲ್ಲಿ ಕೂಡ ಪಾಲ್ಗೊಂಡಿದ್ದಾರೆ.
ಫೆಬ್ರವರಿ 21ರಂದು ‘ಭೀಮ್ಲಾ ನಾಯಕ್’ ಟ್ರೈಲರ್ ರಿಲೀಸ್
ತನುಜಾ ಚಿತ್ರ ನಿಜ ಜೀವನದ ಕಥೆ. ಕೋವಿಡ್ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯೊಬ್ಬರು 350 ಕಿ.ಮೀ ದೂರ ಪ್ರಯಾಣಿಸಿ ಪರೀಕ್ಷೆ ಬರೆದಿದ್ದರು. ಕೊರೊನಾ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲಾಗದೆ ಯುವತಿ ಅಸಹಾಯಕತೆ ವ್ಯಕ್ತಪಡಿಸಿದ್ದರು. ಈ ವೇಳೆ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರು ಸಹಾಯ ಮಾಡಿದ್ದರು. ನೀಟ್ ಪರೀಕ್ಷೆ ಬರೆದು ಯುವತಿ ಪಾಸಾಗಿದ್ದರು. ಈ ಸ್ಟೋರಿಯೇ ಪ್ರಮುಖ ಕಥಾಹಂದರವಾಗಿ ನಿರ್ದೇಶಕ ಹರೀಶ್ ಎಂ.ಡಿ. ಚಿತ್ರದಲ್ಲಿ ಮೂಡಿಬಂದಿದೆ .
ಆ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದರು. ಇದೀಗ ಸಿನಿಮಾದಲ್ಲಿ ಕೂಡ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.