
ನವದೆಹಲಿ: ಸ್ಪೀಕರ್ ಯು.ಟಿ.ಖಾದರ್ ಅವರಿಗೆ ‘ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆದ ಭಾರತೀಯ ಬುದ್ಧಿಜೀವಿಗಳ ಸಮ್ಮೇಳನ ಸಮಾರಂಭದಲ್ಲಿ ಈ ವಿಶೇಷ ಪ್ರಶಸ್ತಿಯನ್ನು ಸ್ಪೀಕರ್ ಖಾದರ್ ಅವರಿಗೆ ಪ್ರದಾನ ಮಾಡಲಾಯಿತು.
ಛತ್ತೀಸ್ ಗಢ ರಾಜ್ಯಪಾಲ ಬಿಸ್ವ ಭೂಷಣ್ ಹರಿಚರಣ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಅವರ ಸಮ್ಮುಖದಲ್ಲಿ, ಯು.ಟಿ. ಖಾದರ್ ಅವರಿಗೆ ‘ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.