ತಂತ್ರಜ್ಞಾನದ ಬಳಕೆ ಹೆಚ್ಚಿದಂತೆಲ್ಲ ಅಪರಾಧ ಪ್ರಕರಣಗಳೂ ಸಹ ಏರಿಕೆಯಾಗುತ್ತಿವೆ. ಅಪರಾಧಿಗಳು ವಿವಿಧ ಮಾರ್ಗಗಳ ಮೂಲಕ ಜನಸಾಮಾನ್ಯರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಹಣ ದೋಚುತ್ತಿದ್ದಾರೆ. ಜೊತೆಗೆ ಹ್ಯಾಕಿಂಗ್, ಡೇಟಾ ದುರ್ಬಳಕೆ ಸಹ ನಡೆಯುತ್ತಿದೆ.
ಇದೀಗ ರಾಜ್ಯ ಸರ್ಕಾರ ಇದರ ತಡೆಗಾಗಿ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ. ನೂತನ ಸೈಬರ್ ನೀತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದ್ದು ಇನ್ನೊಂದು ತಿಂಗಳಲ್ಲಿ ಇದು ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನದ ಹಬ್ ಎಂದೇ ವಿಶ್ವಮಟ್ಟದಲ್ಲಿ ಗುರುತಿಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಸೈಬರ್ ಅಪರಾಧ ಸಂಭವಿಸಿದ ಬಳಿಕ ತಕ್ಷಣ ಮಾಡಬೇಕಾಗಿರುವುದೇನು ಎಂಬುದರ ಅರಿವು ಮೂಡಿಸುವುದು ಸೇರಿದಂತೆ ಹಲವು ಕ್ರಮಗಳನ್ನು ನೂತನ ನೀತಿಯಲ್ಲಿ ಸೇರ್ಪಡೆ ಮಾಡಲಾಗುತ್ತದೆ.