ಗದಗ: ರಾಜ್ಯಾದ್ಯಂತ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಲವೆಡೆ ಮಳೆ ಅವಾಂತರದಿಂದಾಗಿ ಜೀವಹಾನಿ, ಬೆಳೆಹಾನಿ ಸಂಭವಿಸಿದ್ದು, ಹಲವರು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.
ಈ ಮಧ್ಯೆ ಮಳೆ ನಡುವೆಯೂ ಸೇತುವೆ ನಿರ್ಮಾಣ ಕಾಮಗಾರಿಗಾಗಿ ಹೋದ ಕಾರ್ಮಿಕರು ಬೆಣ್ಣೆಹಳ್ಳದಲ್ಲಿ ಸಿಲುಕಿಕೊಂಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
7ನೇ ವೇತನ ಆಯೋಗ; ತಿಂಗಳ ಡಿಎ ಬಾಕಿ ಶೀಘ್ರದಲ್ಲೇ ಬಿಡುಗಡೆ…..?
ನಿನ್ನೆಯೇ ಸೇತುವೆ ನಿರ್ಮಾಣ ಕಾಮಗಾರಿಗಾಗಿ ತೆರಳಿದ್ದರು. ಆದರೆ ಭಾರಿ ಮಳೆಯಿಂದ ವಾಪಸ್ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಇಂದು ಬೆಳಿಗ್ಗೆ ಬೆಣ್ಣೆ ಹಳ್ಳದ ಮೂಲಕ ಬರಲು ಯತ್ನಿಸಿದ್ದಾರೆ. ಆದರೆ ಹಳ್ಳದಲ್ಲಿ ಏಕಾಏಕಿ ನೀರು ಹೆಚ್ಚಿದ್ದರಿಂದ ನಾಲ್ವರು ಕಾರ್ಮಿಕರು ಬೆಣ್ಣೆಹಳ್ಳದಲ್ಲಿ ಸಿಲುಕಿದ್ದು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ.
ಯಲ್ಲಪ್ಪ, ಅರುಣ ತಲವಾರ, ಪರಶುರಾಮ ಹಾಗೂ ಸಿದ್ದು ಹಳ್ಳದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ದೌಡಾಯಿಸಿದ್ದು ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದಾರೆ.