ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ದಲ್ಲಾಳಿ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಆರ್.ಅಶೋಕ್, ಓರ್ವ ಮಾಜಿ ಸಿಎಂ ಆಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸೂಟ್ ಕೇಸ್ ಸಂಸ್ಕೃತಿ ಬಿಜೆಪಿಯಲ್ಲಿ ಹಿಂದೆಯೂ ಇಲ್ಲ, ಮುಂದೆಯೂ ಇರುವುದಿಲ್ಲ. ಸೂಟ್ ಕೇಸ್ ಸಂಸ್ಕೃತಿ ಏನಿದ್ದರೂ ಜೆಡಿಎಸ್ ನದ್ದು. ಕುಮಾರಸ್ವಾಮಿ ಮಾತನಾಡುವ ಮೊದಲು ಯೋಚಿಸಿ ಮಾತನಾಡಲಿ ಎಂದರು.
ಟ್ವಿಟರ್ ನೀಡ್ತಿದೆ ಹಣ ಗಳಿಸುವ ʼಬಂಪರ್ʼ ಅವಕಾಶ
ಕುಮಾರಸ್ವಾಮಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಕುಮಾರಸ್ವಾಮಿ ನೀಡುವ ಇಂತಹ ಹೇಳಿಕೆಗಳು ಅವರ ಗೌರವ, ಘನತೆಯನ್ನೇ ಕಡಿಮೆ ಮಾಡುತ್ತದೆ ಎಂದು ಕಿಡಿಕಾರಿದರು.