ಮಂಗಳೂರು: ಮಂಗಳೂರಿನಲ್ಲಿ ಕುಖ್ಯಾತ ರೌಡಿಯಾಗಿದ್ದವರು ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಆಗಿ ಮಾದಕ ವಸ್ತುಗಳ ಮಾರಾಟ ಹಾದಿ ಹಿಡಿದಿದ್ದ ಆರೋಪಿಗಳನ್ನು ಬೆಂಗಳೂರು ಹೆಬ್ಬಾಳ ಠಾಣೆ ಪೊಲಿಸರು ಬಂಧಿಸಿದ್ದಾರೆ.
ಹಸನ್ ಸಾದಿಕ್, ಕಲ್ಕಾನ್ ಬಂಧಿತ ಆರೋಪಿಗಳು. ಹಸನ್ ಸಾದಿಕ್ ವಿರುದ್ಧ ಮಂಗಳೂರಿನ ವಿವಿಧ ಠಾಣೆಗಳಲ್ಲಿ ಸುಲಿಗೆ, ದರೋಡೆ, ಕೊಲೆ ಯತ್ನ ಸೇರಿದಂತೆ 17 ಪ್ರಕರಣಗಳು ದಾಖಲಾಗಿದ್ದವು.
ರೌಡಿಸಂ ಬಿಟ್ಟು ಸುಲಭವಾಗಿ ಹಣಗಳಿಸಲು ಡ್ರಗ್ ಪೆಡ್ಲರ್ ಹಾದಿ ತುಳಿದಿದ್ದ ಹಸನ್, ಕಲ್ಕಾನ್ ಎಂಬಾತ ಜತೆ ಸೇರಿ ಡ್ರಗ್ ಮಾರಾಟ ದಂಧೆಯಲ್ಲಿ ತೊಡಗಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೆಬ್ಬಾಳ ಪೊಲೀಸರು ಇದೀಗ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 23 ಗ್ರಾಂ ಎಂಡಿಎಂ ಡ್ರಗ್ಸ್ ಹಾಗೂ ಬೈಕ್ ವಶಕ್ಕೆ ಪಡೆದಿದ್ದಾರೆ.