ದಾವಣಗೆರೆ: ಮೆಗಾ ಸಿಟಿ ಹಗರಣದಲ್ಲಿ ಸಿ.ಪಿ. ಯೋಗೇಶ್ವರ್ ಭಾಗಿಯಾಗಿದ್ದಾರೆ. ಅಲ್ಲದೇ ಈಗ ನಾಯಕತ್ವ ಬದಲಾವಣೆ ನಿಟ್ಟಿನಲ್ಲೂ ಯತ್ನ ನಡೆಸಿದ್ದಾರೆ. ಯೋಗೇಶ್ವರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಮೆಗಾ ಸಿಟಿ ಹಗರಣದಲ್ಲಿ ಯೋಗೇಶ್ವರ್ ಬಂಧನವಾಗಬೇಕು. ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ 65 ಶಾಸಕರ ಸಹಿ ಸಂಗ್ರಹಿಸಿ ಸಿಎಂಗೆ ನೀಡಿದ್ದೇವೆ. ಸಂಪುಟದಿಂದ ಯೋಗೇಶ್ವರ್ ಅವರನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೊರೊನಾ ಸಂಕಷ್ಟ ಎದುರಾಗಿದೆ. ಹೀಗಾಗಿ ಕೊರೊನಾ ಸಂದರ್ಭ ಮುಗಿಯಲಿ. ನಂತರ ಶಾಸಕರು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ. ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾ ಮಾಡುವವರೆಗೂ ಸುಮ್ಮನೆ ಕೂರಲ್ಲ ಎಂದರು.