ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿ.ವೈ. ಚಂದ್ರಚೂಡ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿಯಾಗಿದ್ದ ಯು.ಯು. ಲಲಿತ್ ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನವನ್ನು ಚಂದ್ರಚೂಡ್ ತುಂಬಲಿದ್ದಾರೆ.
ಮಹತ್ವದ ಸಂಗತಿ ಎಂದರೆ ಚಂದ್ರಚೂಡ್ ಅವರ ತಂದೆ ವೈ.ವಿ. ಚಂದ್ರಚೂಡ್ ಕೂಡಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದು, 1978 ರಿಂದ 1985 ರ ವರೆಗೆ ಕಾರ್ಯ ನಿರ್ವಹಿಸಿದ್ದರು.
ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯಲಿದ್ದು, 2024ರ ನವೆಂಬರ್ 10 ರಂದು ನಿವೃತ್ತಿಯಾಗಲಿದ್ದಾರೆ.