ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ, ಸಿ.ಟಿ.ರವಿ ರಾಜ್ಯದ ದೊಡ್ಡ ಮಾಸ್ಟರ್ ಮೈಂಡ್ ಉಗ್ರ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿನ್ ಮಿಗಾ, ಕುಕ್ಕರ್ ಸ್ಫೋಟಿಸಿದ್ದ ಶಾರಿಕ್ ಗಿಂತಲೂ ಸಿ.ಟಿ.ರವಿ ಒಂದು ಕೈ ಮೇಲು. ರಾತ್ರೋರಾತ್ರಿ ದತ್ತಪೀಠದಲ್ಲಿ ಗೋರಿ ನಾಶ ಮಾಡಿದ್ದಾರೆ. ಭಯದ ವಾತಾವರಣ ನಿರ್ಮಿಸಲು ಗೋರಿ ನಾಶಮಾಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗೋರಿ ನಾಶಮಾಡಿ ರಾಜಕೀಯ ಸ್ಥಾನ ಭದ್ರಪಡಿಕೊಂಡರು. ನೈಜ ಹಿಂದೂಗಳಿಗೆ ಸಿ.ಟಿ.ರವಿ ಬೇಕಾಗಿಲ್ಲ. ಸಿ.ಟಿ.ರವಿ ಬಾಯಿಗೆ ಬಂದಂತೆ ಮಾತುಗಳನ್ನು ಆಡಿದ್ದಾರೆ. ನಾವು ಹಿಂದೂಗಳೆ ಕೈಗೆಬಳೆತೊಟ್ಟುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.