CNG ವಾಹನ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮಾಲೀಕರು, ವಾಹನಗಳ ಸಿಲಿಂಡರ್ ಗಳಿಗೆ ಸುರಕ್ಷತಾ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಸಿ ಎನ್ ಜಿ ವಾಹನಗಳ ಮಾಲೀಕರು ಮೂರು ವರ್ಷಗಳಿಗೊಮ್ಮೆ ಹೈಡ್ರೋಸ್ಟ್ರಾಟಿಕ್ ಸ್ಟ್ರೆಚ್ ಪರೀಕ್ಷೆ ನಡೆಸಬೇಕಾಗಿದ್ದು, ಈ ಸಂದರ್ಭದಲ್ಲಿ ಸುರಕ್ಷತಾ ಸಾಮರ್ಥ್ಯದ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕಾಗಿದೆ.
ಈ ವಾಹನಗಳ ಸಿಲಿಂಡರ್ ಬಾಳಿಕೆ 20 ವರ್ಷಗಳು ಎಂದು ಹೇಳಲಾಗಿದ್ದು, ಸಿಲಿಂಡರ್ ಸುರಕ್ಷತಾ ಪರೀಕ್ಷೆ ನಡೆಸಲು ಬೆಂಗಳೂರು ಮೂಲದ ಎಂಜಿಆರ್ ಹೈಡ್ರೋಟೆಸ್ಟ್ ಇಂಕ್ ಸಂಸ್ಥೆಯನ್ನು ಅಧಿಕೃತವಾಗಿ ನೇಮಿಸಲಾಗಿದೆ.