ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಸಿನಿಮಾ ಥಿಯೇಟರ್ ಒಂದರ ಗೋಡೆ ಕುಸಿದು ಬಿದ್ದು ಅವಘಡ ಸಂಭವಿಸಿದೆ.
ಕೆ.ಆರ್. ಪುರಂನಲ್ಲಿರುವ ಕೃಷ್ಣ ಥಿಯೇಟರ್ ನಲ್ಲಿ ʼಚಾರ್ಲಿʼ ಸಿನಿಮಾ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ಸುರಿದ ಭಾರಿ ಮಳೆಗೆ ಥಿಯೇಟರ್ ಗೋಡೆಯೇ ಕುಸಿದುಬಿದ್ದಿದೆ. ಥಿಯೇಟರ್ ಕಾಂಪೌಂಡ್ ಬಳಿ ಪಾರ್ಕ್ ಮಾಡಲಾಗಿದ್ದ 24 ಬೈಕ್ ಗಳು ಸಂಪೂರ್ಣ ಜಖಂ ಗೊಂಡಿದ್ದು, ಸಿನಿಮಾ ವೀಕ್ಷಣೆಗೆ ಬಂದ ಪ್ರೇಕ್ಷಕರು ವಾಪಸ್ ಮನೆಗೆ ತೆರಳಲು ಪರದಾಡಿದ್ದಾರೆ.
‘ಕಿತ್ತೂರು ಕರ್ನಾಟಕ’ ಭಾಗದ ಜನತೆಗೆ ಮತ್ತೊಂದು ಗುಡ್ ನ್ಯೂಸ್
ಮಳೆಯ ಅಬ್ಬರದಿಂದಾಗಿ ಥಿಯೇಟರ್ ಗೋಡೆ ಕುಸಿದಿದ್ದು, ಥಿಯೇಟರ್ ಮಾಲೀಕರ ನಿರ್ಲಕ್ಷವೇ ಈ ಅವಘಡಕ್ಕೆ ಕಾರಣ ಎಂದು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.