ಬೆಂಗಳೂರು: ಇತ್ತೀಚೆಗೆ ಸಿನಿಮಾಗಳಲ್ಲಿ ಕೇಸರಿ ಬಟ್ಟೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತೀವ್ರವಾಗಿ ಪ್ರಶ್ನೆ ಮಾಡಿದ್ದು, ಬೇರೆ ಬಣ್ಣ ಬಳಸಲು ಯಾಕೆ ಆಗಲ್ಲ? ಎಂದು ಕೇಳಿದ್ದಾರೆ.
ಸ್ಪಿರಿಟ್ ಆಫ್ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಮಾತಾನಡಿದ ಬಿ.ಎಲ್.ಸಂತೋಷ್, ನಮ್ಮವರೊಬ್ಬರು ಸಿನಿಮಾ ಸರ್ಟಿಫಿಕೇಷನ್ ಕಮಿಟಿಯಲ್ಲಿದ್ದಾರೆ. ಚಿತ್ರದಲ್ಲಿ ಅತ್ಯಾಚಾರ ಮಾಡುವ ಇನ್ಸ್ ಪೆಕ್ಟರ್ ಕೇಸರಿ ಶಾಲು ಹಾಕಿದ್ದ. ಸಿನಿಮಾ ನೋಡುವಾಗ ಕೇಸರಿ ಶಾಲು ಯಾಕೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಿರ್ದೇಶಕ ಟೇಕ್ ಇಟ್ ಈಸಿ ಎಂದು ಹೇಳಿದ್ದರು. ಕೇಸರಿ ಬಗ್ಗೆಯೇ ಟೇಕ್ ಇಟ್ ಈಸಿ ಯಾಕೆ? ಬೇರೆಬಣ್ಣ ಯಾಕಿಲ್ಲ? ಪೊಲೀಸರನ್ನು ಕೆಟ್ಟವರೆಂದು ತೋರಿಸಲು ಅದಕ್ಕೆ ಕೇಸರಿ ಶಾಲು ಹಾಕಿ ಯಾಕೆ ತೋರಿಸುವುದು ಎಂದು ಪ್ರಶ್ನಿಸಿದರು.
ಸಿನಿಮಾ ಮೂಲಕ ನರೆಟೀವ್ ಕಂಟ್ರೋಲ್ ಮಾಡಲು ಪ್ರಯತ್ನ ಮಾಡಿದರು. ದೇಶದಲ್ಲಿ ಅವಾರ್ಡ್ ಗಳನ್ನು ಕೂಡ ಕಂಟ್ರೋಲ್ ಮಾಡಲು ಯತ್ನಿಸಿದರು. ನೆಹರೂ ಲೆಫ್ಟ್ ಆನ್ ಲೆಗಸಿ. ನೆಹರು ಬಗ್ಗೆ ಆಕ್ಷೇಪ ಇಲ್ಲ ಆದರೆ ಅವರು ಬಿಟ್ಟುಹೋದ ಲೆಗಸಿ ನಮ್ಮ ದೇಶದ ನರೆಟಿವ್ ಕಂಟ್ರೋಲ್ ಮಾಡಿತ್ತು. ನಮ್ಮ ದೇಶಕ್ಕೆ ಮಾನವೀಯತೆಯೇ ಇಲ್ಲ ಎಂದು ಕೂಡ ಅವರು ಹೇಳಿದರು. ಕೆಲವರು ಬ್ರಿಟಿಷರನ್ನೇ ತಮ್ಮ ಪೂರ್ವಜರು ಎಂದು ಅಂದುಕೊಂಡವರೂ ಕೂಡ ಇದ್ದಾರೆ ಎಂದು ಹೇಳಿದರು.