ಮೈಸೂರು: ರಾಜಕೀಯದಲ್ಲಿ ಧ್ರುವೀಕರಣ ಹೊಸದೇನೂ ಅಲ್ಲ. ಆಗಾಗ ರಾಜಕೀಯ ಧ್ರುವೀಕರಣ ನಡೆಯುತ್ತಿರುತ್ತದೆ ಎಂದು ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಸಿ. ಮಹದೇವಪ್ಪ, ಸಿದ್ದರಾಮೋತ್ಸವದ ಬಳಿಕ ರಾಜಕೀಯ ಧ್ರುವೀಕರಣವಾಗಲಿದೆ. ರಾಜಕೀಯ ಧ್ರುವೀಕರಣ ಹೊಸದೇನೂ ಅಲ್ಲ. 2018ರಲ್ಲಿ ರಾಜಕೀಯ ಧ್ರುವೀಕರಣ ಆಗಿದ್ದಕ್ಕೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದು, ನರಸೀಪುರದಲ್ಲಿ ನಾನು ಸೋತಿದ್ದೆ ಎಂದು ಹೇಳಿದರು.
ಸಿದ್ದರಾಮಯ್ಯ ಅಮೃತ ಮಹೋತ್ಸವದ ಬಳಿಕ ರಾಜಕೀಯ ಧ್ರುವೀಕರಣವಾಗುವ ಸಾಧ್ಯತೆ ಇದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಎಚ್ಚರಿಕೆಯಿಂದ ಇರಬೇಕು ಎಂದರು.