ನವದೆಹಲಿ: ಸಂಘ ಪರಿವಾರ, ಮರ್ಡರ್ ಕೇಸ್ ಗಳಲ್ಲಿ ಭಾಗಿಯಾದವರಿಗೂ ವೈಪ್ಲಸ್ ಭದ್ರತೆ ಒದಗಿಸಲಾಗುತ್ತಿದೆ. ವಿಪಕ್ಷ ನಾಯಕರಿಗೆ ಕೊಲೆ ಬೆದರಿಕೆಗಳಿದ್ದರೂ ಸರ್ಕಾರ ಈವರೆಗೆ ಭದ್ರತೆ ಒದಗಿಸಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ತಮಗೂ ಸೇರಿ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ 61 ಜನರಿಗೆ ಕೊಲೆ ಬೆದರಿಕೆಗಳಿವೆ. ನಾನು ವಿಪಕ್ಷ ನಾಯಕನಾಗಿ 6 ತಿಂಗಳಾಗುತ್ತಾ ಬಂತು ಆದರೂ ಸರ್ಕಾರ ಈವರೆಗೆ ಭದ್ರತೆ ಒದಗಿಸಿಲ್ಲ. ಇದೊಂದು ರೀತಿಯ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಮೋಹನ್ ಭಾಗ್ವತ್ ರಾಜ್ಯಕ್ಕೆ ಬಂದ್ರೆ ಭದ್ರತೆ ಕೊಡ್ತಾರೆ. ಹೈವೆ ಕ್ಲೀನ್ ಮಾಡಿ ದಾರಿ ಬಿಟ್ಟು ಅವರಿಗೆ ಸೆಕ್ಯೂರಿಟಿ ಕೊಡಲಾಗುತ್ತದೆ. ಕೇವಲ ಸಂಘ ಪರಿವಾರದವರಿಗೆ ಅದರಲ್ಲೂ ಮರ್ಡರ್ ಕೇಸ್ ಇದ್ದವರಿಗೂ ಭದ್ರತೆ ಒದಗಿಸಲಾಗಿರುವುದನ್ನು ನೋಡಿದ್ದೇವೆ. ವಿಪಕ್ಷ ನಾಯಕರಾದರೂ ನಮಗೆ ಭದ್ರತೆ ಕೊಡುತ್ತಿಲ್ಲ. ಇದು ಸರ್ಕಾರದ ಉದ್ದೇಶಪೂರ್ವಕ ನಡೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.