ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಮಂಡಿಸುವ ಬಜೆಟ್ ಸಾರ್ವಜನಿಕರ ಮೇಲೆ ಸಾಲ ಬೀಳುವಂತಹ ಬಜೆಟ್ ಎಂದು ಮಾಜಿ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಆರ್. ಅಶೋಕ್, ಸಿದ್ದರಾಮಯ್ಯನವರ ಬಜೆಟ್ ಜನರ ಮೇಲೆ ಸಾಲ ಹೊರಿಸುವ ಬಜೆಟ್. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲ್ಲ. ಸಾಮಾನ್ಯ ಜನರ ತಲೆ ಮೇಲೆ ಸಾಲದ ಹೊರೆ ಹೊರಿಸಲಿದ್ದಾರೆ ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಈವರೆಗೆ ಯಾವುದೂ ಜಾರಿ ಮಾಡಿಲ್ಲ. ಈಗಾಗಲೇ ಜನ ಸಾಲದಲ್ಲಿದ್ದಾರೆ. ಇನ್ಮುಂದೆ ತೆರಿಗೆ ಹೊರೆ ಜೊತೆ ಲೋನ್ ತೆಗೆದುಕೊಳ್ಳುವುದರಿಂದ ಕರ್ನಾಟಕದ ಪ್ರತಿಯೊಬ್ಬ ನಾಗರಿಕರ ತಲೆ ಮೇಲೆ ಸಾಲದ ಹೊರೆ ಬೀಳಲಿದೆ ಎಂದು ಗುಡುಗಿದರು.