ಸಿಂದಗಿ: ಕಾಂಗ್ರೆಸ್ ನಾಯಕರ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ’ಖಾಲಿ ಡಬ್ಬ ಇದ್ದಂತೆ’ ಎಂದು ಗುಡುಗಿದ್ದಾರೆ.
ಸಿಂದಗಿಯಲ್ಲಿ ಮಾತನಾಡಿದ ಈಶ್ವರಪ್ಪ, ನಾವು ದಲಿತರನ್ನು ಉದ್ದಾರ ಮಾಡಿದ್ದೇವೆ, ಅಲ್ಪಸಂಖ್ಯಾತರ ಪರ ಇದ್ದೇವೆ ಎಂದು ಹೇಳಿಕೆಗಳನ್ನು ನೀಡುತ್ತಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಖಾಲಿ ಡಬ್ಬಾ ಇದ್ದಂತೆ. ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ, ಯಾರ ಪರವಾಗಿಯೂ ಇಲ್ಲ. ಸುಮ್ಮನೇ ಹೇಳಿಕೆ ನೀಡುತ್ತಿದ್ದಾರೆ. ಖಾಲಿ ಡಬ್ಬ ಹೆಚ್ಚು ಶಬ್ದ ಮಾಡತ್ತೆ, ಹಾಗೇ ಕಾಂಗ್ರೆಸ್ ನಾಯಕರು ಖಾಲಿ ಡಬ್ಬದಂತೆ ಶಬ್ದ ಮಾಡುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ತಿಂಗಳಲ್ಲಿ 2 ದಿನ ಮಹಿಳಾ ಸಿಬ್ಬಂದಿಗೆ ಸಿಗಲಿದೆ ಮುಟ್ಟಿನ ರಜೆ
ನಮ್ಮ ಪ್ರಧಾನಿ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದರು. ನಾವು ಎಲ್ಲಾ ಜಾತಿ, ಧರ್ಮ, ಸಮುದಾಯಗಳ ಜೊತೆ ಇದ್ದೇವೆ ಯಾರಿಗೂ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ಸಿದ್ದರಾಮಯ್ಯ, ಡಿಕೆಶಿಯವರದ್ದು, ಸಾಬರ್ ಕಾ ಸಾಥ್ ಸಾಬರ್ ಕಾ ವಿಕಾಸ್. ಆದರೂ ಮುಸ್ಲೀಂರ ಬಗ್ಗೆ ಕಾಂಗ್ರೆಸ್ ಗೆ ನಂಬಿಕೆ ಇಲ್ಲ ಮುಸ್ಲಿಂ ಅಭ್ಯರ್ಥಿಯಿಂದ ವೋಟ್ ಡಿವೈಡ್ ಆಗುತ್ತೆ ಎಂಬ ಭಯವಿದೆ ಎಂದು ಹೇಳಿದರು.
ದೇಶದಲ್ಲಿ, ರಾಜ್ಯದಲ್ಲಿ ಹಿಂದುತ್ವವಾದಿಗಳು ಬಿಜೆಪಿ ಜೊತೆಗಿದ್ದಾರೆ. ಇದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ನಾಯಕರಿಗೆ ಮುಸ್ಲೀಂ ಸಮುದಾಯದ ಬಗ್ಗೆ ನಂಬಿಕೆ ಇಲ್ಲ. ಅವರು ಹೇಳಲಿ ನೋಡೋಣ ಕಾಂಗ್ರೆಸ್ ಮುಸ್ಲೀಂರ ಜೊತೆಗಿದ್ದೇವೆ ಎಂದು ಅದನ್ನು ಕೂಡ ಅವರು ಹೇಳಲ್ಲ. ಸಿಂಧಗಿಯಲ್ಲಿ ಈಗಾಗಲೇ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಮುಖಂಡರು ಭಯದಲ್ಲಿ ಮಾತಾಡುತ್ತಿದ್ದಾರೆ ಎಂದರು.