
ಕೊಪ್ಪಳ: ಸಾರಿಗೆ ಸಚಿವ ಬಿ.ಶ್ರೀರಾಮುಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಜೋಡೆತ್ತುಗಳಲ್ಲ, ಚಿರತೆಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಹಾಗೂ ಡಿಕೆಶಿಯನ್ನು ಜೋಡೆತ್ತುಗಳೆಂದು ಕರೆಯಲಾಗುತ್ತಿತ್ತು. ಆದರೆ ಈಗ ಅವರು ಜೋಡೆತ್ತುಗಳಲ್ಲ, ಚಿರತೆಗಳು. ಇಬ್ಬರಿಗೂ ಸಿಎಂ ಕುರ್ಚಿಯದ್ದೇ ಚಿಂತೆ. ಮುಖ್ಯಮಂತ್ರಿ ಕುರ್ಚಿಗಾಗಿ ಈ ಎರಡೂ ಚಿರತೆಗಳು ಪೈಪೋಟಿ ನಡೆಸಿವೆ. ಆದರೆ ಸಧ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ ಎಂದು ಹೇಳಿದರು.
2023ರ ಚುನಾವಣೆಯಲ್ಲಿ ಬಿಜೆಪಿಯೇ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ. ಮುಂಬರುವ ದಿನಗಳಲ್ಲಿ ಆ ಚಿರತೆಗಳು ಏನೇ ಕಾದಾಟ ನಡೆಸಲಿ. ಬಸವರಾಜ್ ಬೊಮ್ಮಾಯಿ ಅವರೇ ಬಿಜೆಪಿಯ ಮುಂದಿನ ಸಿಎಂ ಎಂದು ತಿಳಿಸಿದರು.