ಬೆಂಗಳೂರು: ನಾನು ಡಿಸಿಎಂ ಹುದ್ದೆಗಾಗಿ ಯಾವುದೇ ಲಾಬಿ ನಡೆಸಿಲ್ಲ. ಯಾವುದು ಒಳ್ಳೆಯದು, ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ವರಿಷ್ಠರ ನಿರ್ಧಾರದಂತೆ ನಾವು ಕೆಲಸ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಈಶ್ವರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದು, ಸಿದ್ದರಾಮಯ್ಯ ತಾನು ಚಾಮುಂಡೇಶ್ವರಿ ಕ್ಷೇತ್ರದ ಮಗ ಅಂತಾರೆ. ಬಾದಾಮಿ ಕ್ಷೇತ್ರದ ಅಳಿಯ ಅಂತಾರೆ, ಮತ್ತೊಮ್ಮೆ ಚಾಮರಾಜಪೇಟೆ ಸೊಸೆ ಅಂತಾರೆ. ಆದ್ರೆ ನಿಮ್ಮ ಅಪ್ಪ ಯಾರು? ಇಂತಹ ಹೇಳಿಕೆಗಳನ್ನು ನೀಡುತ್ತಾ ಕ್ಷೇತ್ರದಿಂದ ಕ್ಷೇತ್ರ ಬದಲಿಸುತ್ತಲೇ ಇದ್ದಾರೆ. ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿಯೇ ಗೆಲ್ಲಲು ಸಾಧ್ಯವಾಗಿಲ್ಲ ಈಗ ಬಾದಾಮಿಯನ್ನೂ ಬಿಟ್ಟು ಚಾಮರಾಜಪೇಟೆಯತ್ತ ಮುಖ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಲಂಪಿಕ್ ಪದಕ ವಿಜೇತೆ ಟ್ರಕ್ ಚಾಲಕರನ್ನು ಹುಡುಕುತ್ತಿರುವುದೇಕೆ….?
ಜೆಡಿಎಸ್ ಆಯ್ತು, ಕಾಂಗ್ರೆಸ್ ಆಯ್ತು ಈಗ ಸಿದ್ದರಾಮಯ್ಯ ಇನ್ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ. ಬಾದಾಮಿಯಿಂದಲೂ ಜನರು ಅವರನ್ನು ದೂರ ಇಡಲಿದ್ದಾರೆ ಎಂದು ಕಿಡಿಕಾರಿದ್ದಾರೆ.