ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಚುನಾವಣೆಯಲ್ಲಿ ನಿಲ್ಲಲೂ ಕ್ಷೇತ್ರವಿಲ್ಲದ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಈಗ ಅಲೆಮಾರಿಯಲ್ಲ ಅರೆ ಅಲೆಮಾರಿಯಾಗಿದ್ದಾರೆ. ಬಾದಾಮಿಯನ್ನೂ ಬಿಟ್ಟು, ಕೋಲಾರ, ಕೊಪ್ಪಳದಿಂದ ನಿಲ್ಲುವ ಯೋಚನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಚಾಮರಾಜಪೇಟೆಯಲ್ಲಿ ವೋಟ್ ಗಾಗಿ ಮುಸ್ಲಿಂರ ಕೈಕಾಲು ಹಿಡಿಯುತ್ತಿದ್ದಾರೆ ಎಂದು ವಾಗ್ದಾಳಿ ನದೆಸಿದರು.
ಇದೇ ವೇಳೆ ಸಿದ್ದರಾಮೋತ್ಸವ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಸ್ವತಃ ಡಿ.ಕೆ.ಶಿವಕುಮಾರ್ ಹೇಳುತ್ತಾರೆ ಸಿದ್ದರಾಮೋತ್ಸವಕ್ಕೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ ಎಂದು. ಇದರಿಂದಲೇ ಗೊತ್ತಾಗುತ್ತೆ ಹೊಟ್ಟೆಕಿಚ್ಚು ಯಾರಿಗೆ ಎಂಬುದು ಎಂದು ಟಾಂಗ್ ನೀಡಿದ್ದಾರೆ.