ಬಳ್ಳಾರಿ: ಹಿಜಾಬ್ ವಿಚಾರವಾಗಿ ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೆನೆಸಿಕೊಂಡರೆ ನೋವಾಗುತ್ತದೆ. ಅವರ ಸ್ಥಿತಿ ತುಘಲಕ್ ರೀತಿಯಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಸಿದ್ದರಾಮಯ್ಯನವರಿಗೆ ಅವರ ನಾಲಿಗೆ, ಮಾತಿನ ಮೇಲೆ ಹಿಡಿತವಿಲ್ಲ. ಗುರುಪರಂಪರೆಗೆ ಅವಮಾನ ಮಾಡಿದ್ದಾರೆ. ಮೊದಲು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
BIG NEWS: ರಾಜ್ಯಕ್ಕೆ ಈ ಸ್ಥಿತಿ ಬರುತ್ತೆ ಎಂದು ಊಹಿಸಿರಲೂ ಇಲ್ಲ; ಮಾಜಿ ಸಿಎಂ ಕುಮಾರಸ್ವಾಮಿ ಕಳವಳ
ಸಿದ್ದರಾಮಯ್ಯ ಅವರ ಆತ್ಮವಿಶ್ವಾಸ ಕಡಿಮೆಯಾಗಿದೆ, ಪಕ್ಷದಲ್ಲಿ ಏಕಾಂಗಿಯಾಗಿದ್ದಾರೆ. ಅವರು ಖಿನ್ನತೆಯಲ್ಲಿದ್ದಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದ ವ್ಯವಸ್ಥೆಯೇ 2-3 ತುಂಡುಗಳಾಗಿವೆ. ಪಕ್ಷದ ಶಾಸಕರಿಗೂ ಗೊಂದಲವುಂಟಾಗಿದೆ. ಸಿದ್ದರಾಮಯ್ಯ ಕಡೆ ಹೋದರೆ ಡಿಕೆಶಿಗೆ ಸಿಟ್ಟು, ಡಿಕೆಶಿ ಕಡೆ ಹೋದರೆ ಸಿದ್ದರಾಮಯ್ಯನವರಿಗೆ ಸಿಟ್ಟು. ಹಾಗಾಗಿ ಪಕ್ಷದ ಸ್ಥಿತಿಯೇ ಗೊಂದಲದಲ್ಲಿದೆ ಎಂದು ಟೀಕಿಸಿದ್ದಾರೆ.