ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಎಲ್.ಸಿ ಸಿ.ಎಂ. ಇಬ್ರಾಹಿಂ, ಮನೆ ಕೀಲಿಕೈ ಈಗ ಸಿದ್ದರಾಮಯ್ಯ ಕೈಗೆ ಸಿಕ್ಕಿದೆ ಮನೆಗೆ ಬಂದ ಸೊಸೆಗೆ ನೀನು ವಲಸೆ ಬಂದವಳು ಎಂದು ಹೇಳಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಮನೆಗೆ ಸೊಸೆ ಹೊಸದಾಗಿಯೇ ಬರುತ್ತಾಳೆ. ಅವಳಿಗೆ ನೀನು ವಲಸೆ ಬಂದವಳು ಎನ್ನಲಾಗದು. ಸೊಸೆ ಬಂದು ಕೆಲ ದಿನಕ್ಕೆ ಕೀಲಿಕೈ ಅವಳ ಕೈಗೆ ಹೋಗುತ್ತೆ. ಹಾಗೇ ಈಗ ಸಿದ್ದರಾಮಯ್ಯ ಕೈಗೆ ಕೀಲಿಕೈ ಸಿಕ್ಕಿದೆ. ವಲಸಿಗ ಹೊಸಬ ಎನ್ನುವ ಜಟಾಪಟಿ ಮುಂದೆ ನಡೆಯಲ್ಲ ಎಂದು ಟಾಂಗ್ ನೀಡಿದ್ದಾರೆ.
ಕೊರೊನಾ ಲಸಿಕೆ ಪಡೆದವರಿಗೆ ಕ್ಷೌರದಂಗಡಿಯಲ್ಲಿ ಸಿಗುತ್ತೆ ವಿಶೇಷ ಸೇವೆ..!
ಇಷ್ಟಕ್ಕೂ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿದ್ದು ಯಾರು ? ಬಳ್ಳಾರಿ ಪಾದಯಾತ್ರೆಯಲ್ಲಿ ಅವರನ್ನು ಮುಂದೆ ತಂದಿದ್ದು, ಇಂಥವನೊಬ್ಬ ಇದ್ದಾನೆ ಎಂದು ಮೇಕಪ್ ಮಾಡಿ, ಹೀರೋ ಮಾಡಿದ್ದೇ ನಾವು. ಅವರು ಹೀರೋ ಇದ್ದರೂ ಹಿನ್ನೆಲೆ ಗಾಯಕರು ಯಾರೆಂಬುದನ್ನು ಒಮ್ಮೆ ಕ್ಯಾಸೆಟ್ ತಿರುಗಿಸಿ ನೋಡಿ. 1 ರೂ. ಅಕ್ಕಿ, ಮಧ್ಯಾಹ್ನದ ಊಟ ತಂದವರು ಯಾರು? ತಮಿಳುನಾಡಿನಲ್ಲಿ ಕುಳಿತು ಅಧ್ಯಯನ ಮಾಡಿ ತಂದಿದ್ದು, ನಾನು ಆ ಯೋಜನೆ ಸಕ್ಸಸ್ ಆಯ್ತು. ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಯೋಜನೆ ಕೊಟ್ಟೆ. ಸಿದ್ದರಾಮಯ್ಯಗೆ ಒಳ್ಳೆ ಟೀಂ ಸಿಕ್ತು, ಬಿ.ಎಸ್.ವೈ. ಗೆ ಸಿಗಲಿಲ್ಲ. ಅವರಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಇಬ್ಬರೇ ಟೀಂ ಎಂದರು.
ಮೊದಲು ಚುನಾವಣೆ ಗೆದ್ದು ಶಾಸಕರಾಗಿ. ಬಳಿಕ ಅಭಿಪ್ರಾಯ ಪಡೆದು ತೀರ್ಮಾನ ಮಾಡಲಾಗುತ್ತೆ. ರಾಷ್ರೀಯ ಪಕ್ಷದಲ್ಲಿ ಒಂದು ಪದ್ಧತಿ ಇರುತ್ತೆ. ಶೇ.90ರಷ್ಟು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಹೇಳಿದರು.