ಬೆಂಗಳೂರು: ಸ್ವಾಮೀಜಿಗಳು ತಲೆಯ ಮೇಲೆ ಖಾವಿ ಹಾಕಿಕೊಳ್ತಾರೆ, ಅದನ್ನೂ ಪ್ರಶ್ನಿಸುತ್ತೀರಾ? ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಸಿದ್ದರಾಮಯ್ಯನವರಿಗೆ ಧೈರ್ಯ ಇದ್ದರೆ ಮಠಕ್ಕೆ ಹೋದಾಗ ಕೇಳಲಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ಸಿದ್ದರಾಮಯ್ಯನವರು ಮಠಕ್ಕೆ ಹೋದಾಗ ಖುದ್ದಾಗಿ ಸ್ವಾಮೀಜಿಗಳ ಬಳಿ ನೀವ್ಯಾಕೆ ಶಾಲು, ಪೇಟ ಧರಿಸಿದ್ದೀರಿ ಎಂದು ಕೇಳಲಿ ಎಂದರು.
ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬೆಚ್ಚಿಬೀಳಿಸುವ ಸತ್ಯ ಬಯಲು
ಮಠಕ್ಕೆ ಹೋದಾಗ ಕಾಂಗ್ರೆಸ್ ನಾಯಕರು ಸೈಲೆಂಟ್ ಆಗ್ತಾರೆ. ಮಠದಿಂದ ಹೊರಗೆ ಬಂದ ಮೇಲೆ ವೈಲೆಂಟ್ ಆಗ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಅನುಭವಿ ರಾಜಕಾರಣಿ. ಇಂತಹ ಹೇಳಿಕೆಗಳು ಅವರಿಗೆ ಶೋಭೆತರಲ್ಲ ಎಂದು ಹೇಳಿದರು.
ಡಿ.ಜೆ. ಹಳ್ಳಿ, ಕೆ.ಜಿ ಹಳ್ಳಿ ಗಲಾಟೆ ನಡೆಯಿತು ಆಗ ಮಾತನಾಡಿದ್ರಾ ? ಶಾಸಕರ ಮೇಲೆ ಹಲ್ಲೆ ನಡೆಸಿ ಮನೆ ಸುಟ್ಟು ಹಾಕಿದರು ಆಗಲೂ ಯಾಕೆ ಕಾಂಗ್ರೆಸ್ ನಾಯಕರು ಮಾತನಾಡಿಲ್ಲ ? ಕಾಂಗ್ರೆಸ್ ನವರಿಗೆ ಅಲ್ಪಸಂಖ್ಯಾತರ ಮತ ಬೇಕು. ಅದಕ್ಕಾಗಿ ಅಲ್ಪಸಂಖ್ಯಾತರ ಓಲೈಕೆಗಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.