ಬೆಂಗಳೂರು: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಯಕರ ಮಧ್ಯೆ ಕಚ್ಚಾಟ ನಡೆಯುತ್ತಿದ್ದು, ಎಐಸಿಸಿ ಸ್ವಘೋಷಿತ ಅಧ್ಯಕ್ಷೆ ಆತಂಕಕ್ಕೆ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆದು ಬುದ್ಧಿ ಹೇಳಿದ ಬಳಿಕವೂ ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ನಿಂತಿಲ್ಲ. ಪಕ್ಷದ ನೀತಿ ನಿರೂಪಣೆ ವಿಚಾರದಲ್ಲಿ ಅಸ್ಪಷ್ಟತೆ, ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ, ಕಾರ್ಯಕರ್ತರಿಗೆ ತಲುಪದ ವಿಷಯ….. ಇಷ್ಟೊಂದು ಗೊಂದಲವಿಟ್ಟುಕೊಂಡು ಪಕ್ಷ ಕಟ್ಟುವುದು ಹೇಗೆಂಬುದು ಸೋನಿಯಾ ಗಾಂಧಿ ಅವರ ಆತಂಕವಾಗಿದೆ.
ಪ್ರೀತಿ ನಿರಾಕರಿಸಿದ ಯುವತಿ; ಉಸಿರುಗಟ್ಟಿಸಿ ಕೊಂದ ಯುವಕ; ನಂತರ ಮಾಡಿದ್ದೇನು ಗೊತ್ತಾ…?
ಜನರಿಂದ ಆಯ್ಕೆಯಾದವರನ್ನು ಕುಟುಂಬದ ಪರಿಚಾರಿಕೆಗೆ ಬಳಸಿಕೊಂಡರೆ ಪಕ್ಷ ಉಳಿಯುತ್ತಿದೆಯೇ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಲೇವಡಿ ಮಾಡಿದೆ.
ಕಾಂಗ್ರೆಸ್ ವೈಚಾರಿಕತೆ ಎಂದರೆ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣ. ಇದರಿಂದ ಹೊರತಾದ ಚಿಂತನೆಗೆ ಅಲ್ಲಿ ಜಾಗವೇ ಇಲ್ಲ. ಚುನಾಯಿತ ಪ್ರತಿನಿಧಿಗಳ ಆಲೋಚನಾ ಲಹರಿಯನ್ನೇ ಕಾಂಗ್ರೆಸ್ ಹಾಳು ಮಾಡಿದೆ. ದಿಕ್ಕು ಕಾಣದ ಕಾಂಗ್ರೆಸ್, ದಿಕ್ಕೆಟ್ಟು ಹೋಗಿದೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ನೇಪಥ್ಯಕ್ಕೆ ಸರಿದು ಏಳು ದಶಕಗಳೇ ಸಂದಿವೆ. ಈಗಿರುವುದು ಗಾಂಧಿ ಸರ್ ನೇಮ್ ನ್ನು ಹೈಜಾಕ್ ಮಾಡಿದ ಭ್ರಷ್ಟರ ಹಾಗೂ ಕುಟುಂಬವಾದಿಗಳ ಕೂಟ ಎಂದು ಹರಿಹಾಯ್ದಿದೆ.
https://twitter.com/BJP4Karnataka/status/1453264104064487440
https://twitter.com/BJP4Karnataka/status/1453268981180100609