ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಸಲ್ಲಿಸಿದ್ದ ತನಿಖಾ ವರದಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಪ್ರಕರಣದ ತನಿಖೆಗೆ ರಚನೆಗೊಂಡಿದ್ದ ಎಸ್ಐಟಿ ತಂಡ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿ ಹೈಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿತ್ತು. ಎಸ್ ಐ ಟಿ ರಚನೆ ಪ್ರಶ್ನಿಸಿ ಸಂತ್ರಸ್ತ ಯುವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಳು. ಎಸ್ ಐ ಟಿ ರಚನೆಯೇ ಸೂಕ್ತವಾಗಿಲ್ಲ. ಹೀಗಿರುವಾಗ ಅಂತಹ ತನಿಖಾ ತಂಡ ನಡೆಸಿರುವ ತನಿಖಾ ವರದಿ ನಂಬಿಕಾರ್ಹವಲ್ಲ. ಪ್ರಕರಣದ ಬಗ್ಗೆ ಮತ್ತೊಮ್ಮೆ ತನಿಖೆಯಾಗಬೇಕು ಎಸ್ ಐ ಟಿ ತನಿಖಾ ವರದಿಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂ ನಲ್ಲಿ ಮನವಿ ಮಾಡಿದ್ದಳು.
ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಎಸ್ ಐ ಟಿ ತನಿಖಾ ವರದಿಗೆ ತಡೆ ನೀಡಿದ್ದು, ಎಸ್ ಐ ಟಿ ವರದಿ ಬಗ್ಗೆ ಹೈಕೋರ್ಟ್ ತೀರ್ಮಾನಕ್ಕೆ ಬರಲಿ. ಮಾರ್ಚ್ 9ರಂದು ಹೈಕೋರ್ಟ್ ವಿಚಾರಣೆ ನಡೆಸುವಂತೆ ಸೂಚಿಸಿದೆ.