ಬೆಂಗಳೂರು: ಸಿಎಂ ಯಡಿಯೂರಪ್ಪ ಬದಲಾವಣೆ ಚರ್ಚೆ ಬೆನಲ್ಲೇ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಹಲವು ಸಚಿವರು ಸಿಎಂ ಸ್ಥಾನಕ್ಕಾಗಿ ಪೈಪೋಟಿ ಆರಂಭಿಸಿದ್ದಾರೆ. ಆಹಾರ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ತಾನು ಸಿಎಂ ಹುದ್ದೆ ಪ್ರಬಲ ಆಕಾಂಕ್ಷಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕತ್ತಿ, ಸಿಎಂ ಬದಲಾದರೆ ನನ್ನನ್ನು ಸಿಎಂ ರೇಸ್ ನಲ್ಲಿ ಕ್ಲೇಮ್ ಮಾಡಿಕೊಳ್ಳುತ್ತೇನೆ. ನನಗೆ ಅವಕಾಶ ಕೊಟ್ಟರೆ ಒಳ್ಳೆಯ ಕೆಲಸಗಳನ್ನು ಮಾಡಿ ತೋರಿಸುತ್ತೇನೆ. ನನಗೂ ಮುಖ್ಯಮಂತ್ರಿಯಾಗುವ ಆಸೆಯಿದೆ. ಅರ್ಹತೆಯೂ ಇದೆ ಎಂದು ಹೇಳಿದ್ದಾರೆ.
BIG BREAKING: ರಾಜೀನಾಮೆ ಸುಳಿವು ನೀಡಿದ ಸಿಎಂ; ರಾಷ್ಟ್ರೀಯ ನಾಯಕರು ನೀಡುವ ಸೂಚನೆಗೆ ಬದ್ಧ ಎಂದ ಬಿ.ಎಸ್.ವೈ.
ನಾನು ಒಂಭತ್ತು ಬಾರಿ ಶಾಸಕನಾಗಿ ಆಯ್ಕೆಯಾದವನು. ಹಿರಿಯ ಸಚಿವನೂ ಹೌದು. ನನ್ನ ವಿರುದ್ಧ ಯಾವುದೇ ರೀತಿ ಆರೋಪಗಳು ಕೂಡ ಇಲ್ಲ. ರಾಜಕಾರಣದಲ್ಲಿ ಸಾಕಷ್ಟು ಅನುಭವವಿದೆ ಇನ್ನೂ ಕೂಡ ನನಗೆ ಅವಕಾಶಗಳೂ ಇವೆ. ಸಿಎಂ ಯಡಿಯೂರಪ್ಪ ಬದಲಾವಣೆ, ಹೊಸ ಸಂಪುಟ ಏನಾಗುತ್ತೆ ಇದಾವುದರ ಬಗ್ಗೆಯೂ ಮಾತನಾಡುವುದು ಬೇಡ. ಬದಲಾವಣೆಯಾದರೆ ನೂನೂ ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂದು ತಿಳಿಸಿದರು.