ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿಗದಿ ಪಡಿಸಿದ್ದ ಭೋಜನ ಕೂಟ ದಿಢೀರ್ ಮುಂದೂಡಿಕೆಯಾಗಿದೆ.
ಜುಲೈ 26ರಂದು ಸರ್ಕಾರಕ್ಕೆ ಎರಡು ವರ್ಷ ಹಿನ್ನೆಲೆಯಲ್ಲಿ ಜುಲೈ 25ರಂದು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸಿಎಂ ಯಡಿಯೂರಪ್ಪ ಭೋಜನಕೂಟ ಏರ್ಪಡಿಸಿದ್ದರು. ಆದರೀಗ ಭೋಜನಕೂಟ ಮುಂದೂಡಲಾಗಿದೆ.
ಟೋಕಿಯೊ ಒಲಂಪಿಕ್ಸ್: ಸ್ಪರ್ಧೆ ಆರಂಭಕ್ಕೂ ಮುನ್ನವೇ ಮತ್ತೊಂದು ಶಾಕ್ – ಮತ್ತಿಬ್ಬರು ಆಟಗಾರರಿಗೆ ಕೊರೊನಾ
ಜಿಲ್ಲಾ ಉಸ್ತುವಾರಿ ಸಚಿವರು ಜುಲೈ 25ರಂದು ಭೋಜನಕೂಟದಲ್ಲಿ ಭಾಗಿಯಾಗಿ ರಾತ್ರಿ ತಮ್ಮ ಜಿಲ್ಲೆಗಳಿಗೆ ವಾಪಸ್ ಆಗಲು ಕಷ್ಟವಾಗಿರುವುದರಿಂದ ಭೋಜನ ಕೂಟ ಕಾರ್ಯಕ್ರಮವನ್ನು ಜುಲೈ 27 ಅಥವಾ ಬೇರೆ ದಿನ ನಿಗದಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.