ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಶಾಸಕ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ ನೂತನ ಸಚಿವರ ಪಟ್ಟಿಯಲ್ಲಿ ಪ್ರೀತಮ್ ಗೌಡ ಹೆಸರಿಲ್ಲ. ಹಾಸನದಲ್ಲಿ ಜೆಡಿಎಸ್ ಹಾಗೂ ಹೆಚ್.ಡಿ. ದೇವೇಗೌಡ ಕುಟುಂಬದ ವಿರುದ್ಧ ನಿಂತಿದ್ದ ತಮಗೆ ಸಂಪುಟದಲ್ಲಿ ಸ್ಥಾನ ನೀಡದಿರುವುದು ಹಾಗೂ ಸಿಎಂ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದು ಪ್ರೀತಂ ಗೌಡ ಅಸಮಾಧಾನಕ್ಕೆ ಕಾರಣವಾಗಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ನಡೆಯನ್ನು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಪ್ರೀತಂ ಗೌಡ, ಸಿಎಂ ಬೊಮ್ಮಾಯಿ ಅಡ್ಜಸ್ಟ್ ಮೆಂಟ್ ಸರ್ಕಾರ ನಡೆಸಿದರೆ ಹೇಗೆ ? ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ವಿರೋಧಿಯಾಗಿ ರಾಜಕಾರಣ ಮಾಡುತ್ತಿದ್ದೇವೆ. ಈ ಭಾಗಕ್ಕೆ ಸಚಿವ ಸ್ಥಾನ ನೀಡುವುದು ಹಾಗಿರಲಿ ಕೊನೆ ಪಕ್ಷ ಕಾರ್ಯಕರ್ತರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಬೇಡವೇ ? ಅಧಿಕಾರ ಸ್ವೀಕರಿಸುತ್ತಿದ್ದಂತೆ ದೇವೇಗೌಡರನ್ನು ಭೇಟಿಯಾಗುವ ಅವಶ್ಯಕತೆ ಏನಿತ್ತು ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಉತ್ತರ ಕೊಡಲಿ ಎಂದು ಪ್ರೀತಂ ಗೌಡ ಆಗ್ರಹಿಸಿದ್ದಾರೆ.
ಪೋರ್ನೋಗ್ರಫಿ ಪ್ರಕರಣ: ಶಿಲ್ಪಾ ಪತಿ ರಾಜ್ ಕುಂದ್ರಾಗೆ ಮತ್ತೊಂದು ಶಾಕ್
ಮುಂದೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಿವೆ. ಆ ಚುನಾವಣೆ ಕಾರ್ಯಕರ್ತರ ಚುನಾವಣೆ ಎಂಬುದು ಎಲ್ಲರಿಗೂ ಗೊತ್ತು. ಆಗ ನಾವು ಜೆಡಿಎಸ್ ವಿರುದ್ಧವೇ ಚುನಾವಣೆ ನಿಲ್ಲಬೇಕು. ಅವರ ವಿರುದ್ಧ ರಾಜಕೀಯ ಹೇಳಿಕೆಗಳನ್ನು ನೀಡಬೇಕು. ಬೊಮ್ಮಾಯಿ ನಡೆ ನೋಡಿದರೆ ಈಗಿರುವ ನಾಯಕರು ಆ ರೀತಿ ರಾಜಕೀಯ ಹೇಳಿಕೆಗಳನ್ನು ನೀಡುತ್ತಾರೋ ಇಲ್ಲವೋ ಎಂಬ ಅನುಮಾನವಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ನಾನು ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷರು ಸಂಘ ಪರಿವಾರ ಅಗತ್ಯ ಬಿದ್ದರೆ ದೆಹಲಿಗೂ ಹೋಗಿ ಪ್ರಶ್ನಿಸುತ್ತೇನೆ ಎಂದು ಪ್ರೀತಮ್ ಗೌಡ ಕಿಡಿಕಾರಿದ್ದಾರೆ.