ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಈ ಬಗ್ಗೆ ಸಿಎಂ ನಿವಾಸದಲ್ಲಿ ಅಧಿಕೃತವಾಗಿ ಬೋರ್ಡ್ ಹಾಕಲಾಗಿದೆ.
ಇನ್ಮುಂದೆ ಸಿಎಂ ಭೇಟಿಗೆ ಬರುವ ಸಾರ್ವಜನಿಕರು ಮೊಬೈಲ್ ನೊಂದಿಗೆ ಸಿಎಂ ನಿವಾಸ ಪ್ರವೇಶಿಸುವಂತಿಲ್ಲ ಎಂದು ಸಿಎಂ ಖಾಸಗಿ ನಿವಾಸ ಆರ್.ಟಿ.ನಗರ ಮನೆಯ ಹೊರಭಾಗದಲ್ಲಿ ಬೋರ್ಡ್ ಹಾಕಲಾಗಿದೆ.
ಮುಖ್ಯಮಂತ್ರಿಗಳನ್ನು ಭೇಟಿಯಾಗಲೆಂದು ಬರುವವರು ಸಿಎಂ ಜೊತೆ ಫೋಟೋ, ವಿಡಿಯೋಗೆ ಮುಂದಾಗುತ್ತಾರೆ. ಇದರಿಂದ ಸಿಎಂ ಆಡಳಿತಾತ್ಮಕ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ ಈ ಹಿನ್ನೆಲೆಯಲ್ಲಿ ಮೊಬೈಲ್ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.