ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೆ ಮಠಾಧೀಶರು ಸಿಎಂ ಬಿ ಎಸ್ ವೈ ಬೆನ್ನಿಗೆ ನಿಂತಿದ್ದು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಸಿಎಂ ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ತೊಂದರೆಯಾಗಲಿದೆ ಎಂದು ಶ್ರೀಶೈಲ ಪೀಠದ ಶಿವಾಚಾರ್ಯ ಸ್ವಾಮಿಜಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ನಾಯಕ ಯಡಿಯೂರಪ್ಪ, ಓರ್ವ ಜಾತ್ಯಾತೀತ ನಾಯಕ ಕೋವಿಡ್ ನಂತಹ ಸಂಕಷ್ಟದ ಸಂದರ್ಭವನ್ನು ಯಶಸ್ವಿಯಾಗಿ ಎದುರಿಸಿ, ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅಂತವರನ್ನು ಬದಲಿಸುವುದು ಸರಿಯಲ್ಲ ಎಂದಿದ್ದಾರೆ.
ರೋಚಕ ಗೆಲುವಿನೊಂದಿಗೆ ಏಕದಿನ ಸರಣಿ ಜಯಿಸಿದ ಭಾರತ
ಇದೇ ವೇಳೆ ಸಿಎಂ ಬಿ ಎಸ್ ವೈ ಕೆಳಗಿಳಿಸಿದರೆ ಬಿಜೆಪಿಗೆ ಕಠಿಣ ಸ್ಥಿತಿ ಬರುತ್ತದೆ. ಯಡಿಯೂರಪ್ಪನವರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ನಾಲ್ಕು ಬಾರಿ ಸಿಎಂ ಆಗಿದ್ದರೂ ಅವರಿಗೆ ಪದೇ ಪದೇ ಮಾನಸಿಕ ಕಿರುಕುಳ ನೀಡುವುದು ಸರಿಯಲ್ಲ. ಎಷ್ಟೇ ತೊಂದರೆ, ಅಡ್ಡಿ ಆತಂಕಗಳಿದ್ದರೂ ಇಳಿ ವಯಸ್ಸಿನಲ್ಲಿ ಒಳ್ಳೆಯ ಆಡಳಿತ ನಡೆಸುತ್ತಿರುವ ಬಿ ಎಸ್ ವೈಗೆ ಪೂರ್ಣಾವಧಿ ಮುಗಿಸಲು ಅವಕಾಶ ನೀಡಬೇಕು ಎಂದು ಬೆಳ್ಳಾವಿ ಕಾರದೇಶ್ವರ ಮಠದ ವೀರಬಸವ ಸ್ವಾಮೀಜಿ ಹೇಳಿದ್ದಾರೆ.
ಈ ನಡುವೆ ಇಂದು ಕೂಡ ಸಿಎಂ ಬಿ ಎಸ್ ವೈ ಅಧಿಕೃತ ನಿವಾಸ ಕಾವೇರಿಗೆ ಸ್ವಾಮೀಜಿಗಳು ಭೇಟಿ ನೀಡಿದ್ದು, ಯಾದಗಿರಿ ಹಾಗೂ ಕಲಬುರ್ಗಿ ಭಾಗದ ಮಠಾಧೀಶರು ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.