ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ರಾಜ್ಯಕ್ಕೆ ಇಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನಿಡಲಿದ್ದು, ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಸಿಎಂ ಯಡಿಯೂರಪ್ಪ ಪರ-ವಿರೋಧ ತಂತ್ರಗಾರಿಕೆ ಜೋರಾಗಿದೆ. ಈ ನಡುವೆ ಸಿಎಂ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಸಿಎಂ ನಿವಾಸಕ್ಕೆ ದೌಡಾಯಿಸಿದ್ದಾರೆ.
ಅರುಣ್ ಸಿಂಗ್ ಭೇಟಿ ಬೆನ್ನಲ್ಲೇ ನಿನ್ನೆಯಿಂದ ಕೆಲ ಆಪ್ತ ಶಾಸಕರು ಸಿಎಂ ಭೇಟಿಯಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಇದೇ ವೇಳೆ ಇಂದು ಕೂಡ ಶಾಸಕರಾದ ರಾಜು ಗೌಡ, ಮಹೇಶ್ ಕುಮಟಳ್ಳಿ, ರವಿ ಸುಬ್ರಹ್ಮಣ್ಯ ಸೇರಿದಂತೆ ಹಲವು ಶಾಸಕರು ಸಿಎಂ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.
ದಂಗಾಗಿಸುವಂತಿದೆ ಒಳಾಂಗಣ ಸಸಿ ಮಾರಾಟವಾದ ಬೆಲೆ….!
ಇನ್ನೊಂದೆಡೆ ಡಿಸಿಎಂ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಪ್ರಭು ಚೌವ್ಹಾಣ್ ಕೂಡ ಸಿಎಂ ಯಡಿಯೂರಪ್ಪ ಭೇಟಿಗೆ ಸಿದ್ಧತೆ ನಡೆಸಿದ್ದು, ಸಂಜೆ 5 ಗಂಟೆಗೆ ಅರುಣ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸುವ ಮುನ್ನ ಸಚಿವರು ಸಿಎಂ ಭೇಟಿಗೆ ನಿರ್ಧರಿಸಿದ್ದಾರೆ. ಒಟ್ಟಾರೆ ಬಿಜೆಪಿ ಬಣ ರಾಜಕೀಯ ಅಂತಿಮ ಹಂತಕ್ಕೆ ತಲುಪಿದ್ದು, ಸಿಎಂ ಬಿ ಎಸ್ ವೈ ಭವಿಷ್ಯ ಕೂಡ ಇಂದು ಅಥವಾ ನಾಳೆಯೊಳಗೆ ನಿರ್ಧಾರವಾಗಲಿದೆ ಎನ್ನಲಾಗಿದೆ.