ಬೆಂಗಳೂರು: ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಬೆನ್ನಲ್ಲೇ ಸರಣಿ ವಾಗ್ದಾಳಿ ನಡೆಸಿರುವ ಬಿಜೆಪಿ ಕೆಪಿಸಿಸಿ ಕಚೇರಿಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪದಾಧಿಕಾರಿಗಳು ತೆರೆದಿಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ತವರು ಮನೆಯಾಗಿದೆ ಎಂದು ಕಿಡಿಕಾರಿದೆ.
ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿ, ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸ್ಸಿಗರು, ಈಗ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ಕಾಂಗ್ರೆಸ್ ನಾಯಕರಾದ ಉಗ್ರಪ್ಪ ಹಾಗೂ ಸಲೀಂ ಸ್ಪಷ್ಟಪಡಿಸಿದ್ದಾರೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತವೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಕಡಿಮೆ ಖರ್ಚಿನಲ್ಲಿ ಮನೆಯನ್ನು ಹೀಗೆ ಅಲಂಕರಿಸಿ
ಮುಖ್ಯಮಂತ್ರಿಯಾಗುವ ಡಿ.ಕೆ.ಶಿವಕುಮಾರ್ ಕನಸಿಗೆ ಕಾಂಗ್ರೆಸ್ ರಾಜ್ಯ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ. ನಿಮ್ಮ ಅಧ್ಯಕ್ಷ ಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಸ್ವಪಕ್ಷಿಯರೇ ಷರಾ ಬರೆದುಬಿಟ್ಟಿದ್ದಾರೆ.
ಈ ಮಾತುಗಳು ಸಿದ್ದರಾಮಯ್ಯ ಅವರ ಬಹುದಿನಗಳ ’ಡಿಕೆಶಿ ಪದಚ್ಯುತಿ’ ಎಂಬ ಮಾಸ್ಟರ್ ಪ್ಲಾನ್ ಭಾಗವೇ? ಡಿಕೆಶಿ ಅವರೇ ನಿಮ್ಮ ಹುಡುಗರ ಬಳಿಯೇ 50-100 ಕೋಟಿ ಇದೆಯಂತೆ ಹಾಗಾದರೆ ನಿಮ್ಮ ಬಳಿ ಎಷ್ಟಿರಬಹುದು? ಎಂಬುದು ಕೆಪಿಸಿಸಿ ಕಚೇರಿಯಿಂದಲೇ ಎದ್ದಿರುವ ಅಧಿಕೃತ ಅನುಮಾನ.. ಈ ಪ್ರಶ್ನೆ ರಾಜ್ಯದ ಜನತೆಯನ್ನೂ ಕಾಡುತ್ತಿದೆ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಅವರೇ ಉತ್ತರ ನೀಡಿ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಆಗ್ರಹಿಸಿದೆ.