ವಿಜಯಪುರ: ನಾನು ಸಿಎಂ ಸ್ಥಾನಕ್ಕೆ ಅಯೋಗ್ಯನೂ ಅಲ್ಲ, ಅಸಮರ್ಥನೂ ಅಲ್ಲ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಆಗುವ ಕನಸು ಬಿಚ್ಚಿಟ್ಟಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನಾನು ಮುಖ್ಯಮಂತ್ರಿಯಾಗಬೇಕು ಎಂದು ಹೋರಾಟ ಮಾಡುವುದಿಲ್ಲ. ಪಕ್ಷ, ಮೋದಿ ಆಶಿರ್ವಾದ ಮಾಡಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದರು.
ಸಿಎಂ ಅಂತ ಘೋಷಣೆ ಮಾಡಿಸುವುದು, ಲಾಬಿ ಮಾಡುವುದು ಮಾಡಲ್ಲ. ಆದರೆ ಮುಖ್ಯಮಂತ್ರಿಯಾಗುವ ಎಲ್ಲಾ ಸಾಮರ್ಥ್ಯ, ಯೋಗ್ಯತೆಯೂ ನನಗಿದೆ ಎಂದು ಹೇಳಿದರು.