ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಜಟಾಪಟಿ ನಡುವೆಯೇ ಇದೀಗ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣಗಳ ನಡುವೆ ಕಿತ್ತಾಟ ಆರಂಭವಾಗಿದೆ.
ಏಕಾಏಕಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ರಕ್ಷಾ ರಾಮಯ್ಯ ಕೆಳಗಿಳಿಸಿ, ಮೊಹಮ್ಮದ್ ನಲಪಾಡ್ ಗೆ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತ ಸಭೆಯಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಎರಡು ಬಣಗಳ ಒಳಜಗಳ ತಾರಕಕ್ಕೇರಿದೆ.
SHOCKING NEWS: ಕೊರೊನಾ ರೂಪಾಂತರಿಯ ಮತ್ತೊಂದು ಆಘಾತ; ಡೆಲ್ಟಾ ಪ್ಲಸ್ ವೈರಸ್ ಗೆ 42 ಜನ ಬಲಿ…!
ಈ ನಡುವೆ ಫಿಫ್ಟಿ-ಫಿಫ್ಟಿ ಆಧಾರದ ಮೇಲೆ ರಕ್ಷಾ ರಾಮಯ್ಯ ಹಾಗೂ ನಲಪಾಡ್ ಗೆ ಸ್ಥಾನ ನಿಡುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದ್ದಾರೆ. ಆದರೆ ಈ ಬಗ್ಗೆಯೂ ಗರಂ ಆಗಿರುವ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಲಪಾಡ್ ಆಯ್ಕೆ ಬಗ್ಗೆ ಯಾವುದೇ ಪ್ರತಿಕಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಇಲ್ಲಿದೆ ಬೆಂಗಳೂರು ಸುತ್ತಮುತ್ತ ಇರೋ ಪಿಕ್ನಿಕ್ ಸ್ಪಾಟ್
ಈ ನಡುವೆ ಡಿಸೆಂಬರ್ 31ವರೆಗೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಿರಿ ಎಂದು ರಕ್ಷಾ ರಾಮಯ್ಯಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಡೆಡ್ ಲೈನ್ ನೀಡಿದ್ದು, ಒಪ್ಪದಿದ್ದಲ್ಲಿ ರಕ್ಷಾ ರಾಮಯ್ಯ ವಿರುದ್ಧ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ರಕ್ಷಾರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಿದ್ದು, ಅಗತ್ಯ ಬಿದ್ದರೆ ರಕ್ಷಾ ರಾಮಯ್ಯ ಹಾಗೂ ನಲಪಾಡ್ ಇಬ್ಬರನ್ನೂ ಬಿಟ್ಟು ಮೂರನೇಯವರಿಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ. ಒಟ್ಟಾರೆ ಕಾಂಗ್ರೆಸ್ ನಲ್ಲಿ ಹಿರಿ-ಕಿರಿಯ ಬಣಗಳ ಜಿದ್ದಾಜಿದ್ದಿ ತಾರಕಕ್ಕೇರಿದೆ.