ಮನುಷ್ಯನ ಶತ ಶತಮಾನಗಳ ಆಸೆ ಶೀಘ್ರವೇ ಈಡೇರುವ ಸಾಧ್ಯತೆಯಿದೆ. ಮನುಷ್ಯ ಸಾವಿಗೆ ಭಯಪಡುತ್ತಾನೆ. ಅಮರನಾಗಲಿ ಎಂಬುದು ಆತನ ಬಯಕೆ. ಶೀಘ್ರದಲ್ಲೇ ವಿಜ್ಞಾನಿಗಳು ಇದಕ್ಕೆ ಔಷಧಿ ಕಂಡು ಹಿಡಿಯಲಿದ್ದಾರೆ. ಇದು ಯಶಸ್ವಿಯಾದಲ್ಲಿ ಮನುಷ್ಯ ನೂರಲ್ಲ ಸಾವಿರಾರು ವರ್ಷ ಬದುಕುತ್ತಾನೆ. ತಲೆ-ತಲೆಮಾರುಗಳನ್ನು ನೋಡ್ತಾನೆ.
ಈ ಕನಸು ಇನ್ನು ಎರಡು ವರ್ಷಗಳಲ್ಲಿ ಈಡೇರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಾರ್ವರ್ಡ್ ಜೆನೆಟಿಕ್ಸ್ ಪ್ರಾಧ್ಯಾಪಕ ಡೇವಿಡ್ ಸಿಂಕ್ಲೇರ್ ಮಾನವರ ವಯಸ್ಸನ್ನು ಹಿಮ್ಮೆಟ್ಟಿಸಲು ಒಂದು ಪ್ರಯೋಗವನ್ನು ಮಾಡಿದ್ದಾರೆ. ಈ ಪ್ರಯೋಗವನ್ನು ಇಲಿಗಳ ಮೇಲೆ ಪರೀಕ್ಷಿಸಲಾಗಿದೆ. ಮೆದುಳು ಮತ್ತು ಇತರ ಅಂಗಗಳಲ್ಲಿ ಬರುವ ವೃದ್ಧಾಪ್ಯವನ್ನು ಹಿಮ್ಮುಖಗೊಳಿಸಲಾಗಿದ್ದು ಪ್ರಯೋಗ ಯಶಸ್ವಿಯಾಗಿದೆ.
ಇಂಜೆಕ್ಷನ್ ಒಂದನ್ನು ವಯಸ್ಕ ಪ್ರಾಣಿಗಳಿಗೆ ನೀಡಲಾಗುತ್ತದೆ. ಅದು ದೇಹದಲ್ಲಿ ವಯಸ್ಸಿಗೆ ಸಂಬಂಧಿಸಿದ ಜೀವಕೋಶಗಳನ್ನು ಪುನರುತ್ಪಾದಿಸುತ್ತದೆ. ಇದು ಸರಿಯಾಗಿ ಕೆಲಸ ಮಾಡಲು 4 ರಿಂದ 8 ವಾರಗಳು ಬೇಕಾಗುತ್ತದೆ. ಇದಕ್ಕೆ ಅವರು ಕುರುಡಾದ ಇಲಿ ಉದಾಹರಣೆ ನೀಡಿದ್ದಾರೆ. ಮೆದುಳು ಮತ್ತು ನರಕೋಶಗಳ ಸಂಯೋಜನೆಯು ಸರಿಯಾಗಿಲ್ಲದ ಕಾರಣ ಇದು ಸಂಭವಿಸುತ್ತದೆ. ಇಲಿಯ ನರಕೋಶವನ್ನು ಸರಿಪಡಿಸಿದರೆ, ಅದು ಮತ್ತೆ ಚಿಕ್ಕದಾಗುತ್ತದೆ. ಮತ್ತೆ ಎಲ್ಲವನ್ನೂ ನೋಡಬಲ್ಲದು ಎಂದವರು ಹೇಳಿದ್ದಾರೆ.
ಸದ್ಯ ಪ್ರೊಪೆಸರ್ Embryonic Genes ಪ್ರಯೋಗವನ್ನು ಇಲಿಗಳ ಮೇಲೆ ಮಾಡಿದ್ದಾರೆ. ಆದ್ರೆ ತಮ್ಮ ಪ್ರಯೋಗದಲ್ಲಿ ಹೆಚ್ಚಿನ ವಿಶ್ವಾಸ ಹೊಂದಿರುವ ಅವರು ಶೀಘ್ರದಲ್ಲೇ ಮನುಷ್ಯನ ಮೇಲೆ ಪ್ರಯೋಗ ನಡೆಸುವುದಾಗಿ ಹೇಳಿದ್ದಾರೆ. ಮನುಷ್ಯನ ಜೀವನಕ್ಕೆ ಯಾವುದೇ ಮಿತಿಯಿಲ್ಲ. ಗರಿಷ್ಠ ಜೀವನ ನಡೆಸುವ ಗುರಿಯನ್ನು ಮನುಷ್ಯ ಹೊಂದಿರಬೇಕೆಂದು ಅವರು ಹೇಳಿದ್ದಾರೆ.