ಧಾರವಾಡ: ಧಾರವಾಡದಲ್ಲಿ ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಸಾವರ್ಕರ್ ಭಾವ ಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ದೇಶ ದ್ರೋಹದ ಕೆಲಸ, ಹೇಯ ಕೃತ್ಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಕಾಂಗ್ರೆಸ್ ನವರು ಸುಟ್ಟಿದ್ದು ಸಾವರ್ಕರ್ ಭಾವಚಿತ್ರವಲ್ಲ, ಭಾರತ ಮಾತೆಯ ಚಿತ್ರ, ಸಾವರ್ಕರ್ ತಮ್ಮ ಅರ್ಧ ಜೀವನವನ್ನೇ ಜೈಲಿನಲ್ಲಿ ಕಳೆದಂತಹ ವ್ಯಕ್ತಿ. ಓರ್ವ ಕ್ರಾಂತಿಕಾರಿ ದೇಶ ಭಕ್ತನ ಭಾವಚಿತ್ರ ಸುಟ್ಟಿದ್ದೀರಿ ನಿಮಗೆ ದೇಶ ಭಕ್ತಿಯ ಅರಿವಿಲ್ಲವೇ? ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಎಂದು ಎಲ್ಲರೂ ಹೇಳುತ್ತಿದ್ದರೆ. ಸಾವರ್ಕರ್ ಬಗ್ಗೆ ಅವರು ಹೇಳಿಕೆ ನೀಡಿದ್ದು ತಪ್ಪಲ್ಲವೇ? ಸಿದ್ದರಾಮಯ್ಯ ಓರ್ವ ನಾಸ್ತಿಕ. ಈಗ ಮಠಗಳಿಗೆ ಭೇಟಿ ನೀಡಿ, ಸ್ವಾಮೀಜಿಗಳ ಆಶಿರ್ವಾದ ಪಡೆಯುತ್ತಿದ್ದಾರೆ ಇದು ಮತಗಳಿಗಾಗಿ ಆಡುತ್ತಿರುವ ನಾಟಕ. 60 ವರ್ಷಗಳಲ್ಲಿ ಅವರ ನಿಜಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.