ಬೆಂಗಳೂರು: ಕೆಲ ದಿನಗಳ ಹಿಂದೆ ಅಮಾನತುಗೊಂಡಿದ್ದ ಬೈರಮಂಗಲ ಗ್ರಾಮ ಪಂಚಾಯತ್ ಪಿಡಿಒ ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಕ್ರಮ ಈ-ಖಾತೆ ಆರೋಪದಲ್ಲಿ ರವಿ ಅವರನ್ನು ಅಮಾನತು ಮಾಡಲಾಗಿತ್ತು. ಜಿಲ್ಲಾ ಪಂಚಾಯತ್ ಸಿಇಒ ಕಳೆದ ವಾರ ರವಿ ಅವರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದರು.
40ರ ನಂತರ ಅಲರ್ಟ್ ಆಗಲೇಬೇಕು ಪುರುಷರು, ಇಲ್ಲದಿದ್ರೆ ಆಗಬಹುದು ಇಷ್ಟೆಲ್ಲಾ ಸಮಸ್ಯೆ…..!
ಅಕ್ರಮ ಇ – ಖಾತೆ ಆರೋಪಕ್ಕೆ ಸಂಬಂಧಿಸಿದಂತೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಇ-ಖಾತೆ ಬೆಳಕಿಗೆ ಬರುತ್ತಿದ್ದಂತೆ ಇದೀಗ ಪಿಡಿಒ ಹಾರೋಹಳ್ಳಿಯ ಕೊಳ್ಳನಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.