ಬೆಂಗಳೂರು: ಅಮಾನತುಗೊಂಡಿದ್ದ ಇನ್ಸ್ ಪೆಕ್ಟರ್ ಓರ್ವರು ಹೃದಯಾಘತದಿಂದ ವಿಧಿವಶರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ನಂದೀಶ್ ಮೃತ ಪೊಲೀಸ್ ಅಧಿಕಾರಿ. ಮೈಸೂರಿನ ಹುಣಸೂರು ಮೂಲದವರಾದ ನಂದೀಶ್ ಅವರನ್ನು ಕಳೆದ ವಾರ ಸಸ್ಪೆಂಡ್ ಮಾಡಲಾಗಿತ್ತು. ಏರಿಯಾದಲ್ಲಿ ಅವಧಿ ಮೀರಿ ಪಬ್ ನಡೆಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ನಂದೀಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿತ್ತು.
ನಂದೀಶ್ ಅವರಿಗೆ ಏಕಾಏಕಿ ಹೃದಯಾಘಾತವಾಗಿತ್ತು. ಹೃದಯಾಘಾತದಿಂದ ಕೆ.ಆರ್.ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.