ಬೆಳಗಾವಿ: ಸರ್ಕಾರಕ್ಕೆ ಯಾವ ರೀತಿಯಲ್ಲಿ ಯಾವ ಭಾಷೆಯಲ್ಲಿ ಹೇಳಿದರೂ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ರಮೇಶ್ ಕುಮಾರ್ ಹೇಳಬೇಕಾದ ಭಾಷೆಯಲ್ಲಿ ಹೇಳಿದ್ದಾರೆ ಎಂದು ಎಂಎಲ್ ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಸರ್ಕಾರರಕ್ಕೆ ರಮೇಶ್ ಕುಮಾರ್ ಭಾಷೆಯೇ ಸರಿ. ಕನ್ನಡ, ಇಂಗ್ಲೀಷ್ ಯಾವ ಭಾಷೆಯಲ್ಲಿ ಹೇಳಿದರೂ ರಾಜ್ಯ ಸರ್ಕಾರಕ್ಕೆ ಅರ್ಥವಾಗಿಲ್ಲ ಹಾಗಾಗಿ ರಮೇಶ್ ಕುಮಾರ್ ಹೇಳಬೇಕಾದ ಭಾಷೆಯಲ್ಲಿ ಹೇಳಿದ್ದಾರೆ. ರಮೇಶ್ ಕುಮಾರ್ ಯಾವ ದೃಷ್ಟಿಕೋನದಿಂದ ಮಾತನಾಡಿದ್ದಾರೆ ಎಂಬುದನ್ನು ನೋಡಬೇಕಾಗುತ್ತದೆ ಎಂದರು.
ನನಗೂ 8 ಜನ ಹೆಣ್ಣುಮಕ್ಕಳಿದ್ದಾರೆ. ಅವರೆಲ್ಲರ ರಕ್ಷಣೆ, ಕಾಳಜಿ ಎಲ್ಲವೂ ನನ್ನ ಜವಾಬ್ದಾರಿ. ಯಾರೂ ಹೆಣ್ಣು ಮಕ್ಕಳ ಬಗ್ಗೆ ಹಾಗೆ ಮಾತನಾಡಲ್ಲ. ರಮೇಶ್ ಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.
12 ಜನ ಕೋರ್ಟ್ ಗೆ ಹೋಗಿ ತಮ್ಮ ವಿಡಿಯೋ ಗಳಿಗೆ ತಡೆಯಾಜ್ಞೆ ತಂದರು. ಸದಾ ನಗುತ್ತಿರುವ ಸದಾನಂದಗೌಡರದ್ದು ವಿಡಿಯೋ ಇದೆ. ಅವರೂ ಕೋರ್ಟ್ ನಿಂದ ಸ್ಟೇ ತಂದರು. ವಿಡಿಯೋ ಪ್ರವಾಸ ಮಾಡದಂತೆ ಕೋರ್ಟ್ ನಿಂದ ಸ್ಟೇ ತರುವಂತದ್ದು ಅದರಲ್ಲಿ ಏನಿದೆ? ಅದೇನು ವಿಡಿಯೋ? ಈ ಬಗ್ಗೆ ಸರ್ಕಾರ ಸಂಘಪರಿವಾರ ಸುಮ್ಮನಿರುವುದು ಯಾಕೆ? ಮಾನವಂತರಾಗಿದ್ದರೆ ಸ್ಟೇ ಯಾಕೆ ತರುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.