ಚಾಮರಾಜನಗರ : ವಿಚಾರವಾದಿ, ಹಿರಿಯ ಸಾಹಿತಿ ಕೆ.ಎಸ್. ಭಗವಾನ್ (Writer K.S.Bhagavan)ಅವರು ಚಾಮರಾಜನಗರ ಜಿಲ್ಲೆಯ ಬಿಳಿರಂಗನ ಬೆಟ್ಟಕ್ಕೆ ಸಫಾರಿಗೆ (Safari) ತೆರಳಿದ್ದ ವೇಳೆ ಕಾಡಾನೆ (Elephant) ದಾಳಿ ಮಾಡಿರುವ ಘಟನೆ ನಡೆದಿದೆ.
ಸಾಹಿತಿ ಕೆ.ಎಸ್. ಭಗವಾನ್ (K.S.Bhagavan)) ಹಾಗೂ ತಂಡ ಜೀಪ್ ನಲ್ಲಿ ಬಿಳಿಗಿರಿ ರಂಗನಬೆಟ್ಟದ ಕೆ ಗುಡಿಯ ವಲಯದಲ್ಲಿ ಸಫಾರಿ ಮಾಡುತ್ತಿದ್ದ ವೇಳೆ ನಾಲ್ಕೈದು ಆನೆಗಳ ಹಿಂಡಿನಲ್ಲಿ ಇದ್ದ ಆನೆಯೊಂದು ಏಕಾಏಕಿ ಭಗವಾನ್ ಇದ್ದ ಜೀಪಿನ ಮೇಲೆ ದಾಳಿಗೆ ಮುಂದಾಗಿದೆ. ತಕ್ಷಣ ಎಚ್ಚೆತ್ತ ಸಫಾರಿ ವಾಹನದ ಚಾಲಕ ಜೀಪ್ ಅನ್ನು ಹಿಂದಕ್ಕೆ ಚಲಾಯಿಸಿದ್ದಾರೆ. ಸ್ವಲ್ಪ ದೂರ ಹಿಂದಕ್ಕೆ ಹೋದ ನಂತರ ಆನೆ ಅಲ್ಲೇ ನಿಂತಿದೆ.
ಅದೃಷ್ಟವಶಾತ್ ಸಫಾರಿ ಜೀಪ್ನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.