alex Certify BIG NEWS: ಸದನದಲ್ಲಿ ಲೆಕ್ಕದ ಪಾಠ ಮಾಡುವ ಸಿದ್ದರಾಮಯ್ಯನವರಿಗೆ ಲೆಕ್ಕ ಹೇಳಿಕೊಡ್ಬೇಕಾ ? ಸಿ.ಟಿ. ರವಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸದನದಲ್ಲಿ ಲೆಕ್ಕದ ಪಾಠ ಮಾಡುವ ಸಿದ್ದರಾಮಯ್ಯನವರಿಗೆ ಲೆಕ್ಕ ಹೇಳಿಕೊಡ್ಬೇಕಾ ? ಸಿ.ಟಿ. ರವಿ ವಾಗ್ದಾಳಿ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಾಗಿ ಹಣ ನೀಡುವ ರಾಜ್ಯ ಸರ್ಕಾರದ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಸಿಎಂ ಸಿದ್ದರಾಮಯ್ಯನವರಿಗೆ ಲೆಕ್ಕ ಹೇಳಿಕೊಡಬೇಕಾ ? 10X35 ಎಷ್ಟು ರೂಪಾಯಿ ಆಗುತ್ತೆ ? ಸದನದಲ್ಲಿ ಲೆಕ್ಕದ ಪಾಠ ಮಾಡುವವರಿಗೆ ಲೆಕ್ಕ ಗೊತ್ತಿಲ್ವಾ ? ಸುಮ್ಮನೇ ಹೇಳಿಕೆ ಕೊಡುತ್ತಿದ್ದಾರೆ ಇವರು ಏನೂ ಕೊಡುವುದಿಲ್ಲ. ಈಗಾಗಲೇ ಎಲ್ಲಾ ಬೆಲೆಗಳನ್ನು ಏರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಏನ್ ಚಪ್ರಾಸಿ ಅಲ್ವಲ್ಲಾ? ಅವರು ಮೋಸ್ಟ್ ಎಕ್ಸ್ ಪೀರಿಯನ್ಸ್ ಚೀಫ್ ಮಿನಿಸ್ಟರ್ ತಾನೆ ? ಎಲ್ಲಾ ದರವನ್ನು ಇಳಿಸುವ ತಾಕತ್ತು ಅವರಿಗೆ ಇದೆ. ಇವರು ಒಂದು ಮಾದರಿ ಆಗಬೇಕು ಎಂದರೆ ಎಲ್ಲಾ ದರಗಳನ್ನು ಇಳಿಸಬೇಕು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...