![](https://kannadadunia.com/wp-content/uploads/2021/12/a6910c48-a0db-4d27-ad21-80b106c4c913.jpg)
ಹುಬ್ಬಳ್ಳಿ: ಹಲವು ವಿರೋಧಗಳ ನಡುವೆಯೇ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ಹೊರಟಿರುವ ರಾಜ್ಯ ಸರ್ಕಾರ, ಸದನದಲ್ಲಿ ಮಸೂದೆ ಪಾಸ್ ಆಗುವ ವಿಶ್ವಾಸ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಇದೇ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್ ಆಗಲಿದೆ. ಅಧಿವೇಶನ ಮುಗಿಯುವ 2-3 ದಿನಗಳೊಳಗೆ ಕಾಯ್ದೆ ಜಾರಿಯಾಗಲಿದೆ ಎಂದರು.
MES ಮುಖಂಡನ ಮುಖಕ್ಕೆ ಮಸಿ ಬಳಿದ ಕರ್ನಾಟಕ ನವ ನಿರ್ಮಾಣ ಕಾರ್ಯಕರ್ತರು
ಕಾಂಗ್ರೆಸ್ ನಾಯಕರ ವಿರೋಧ ಸಹಜವಾಗಿ ಇರುತ್ತೆ. ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ವಿರೋಧ ಮಾಡುವುದು ಇದ್ದೇ ಇದೆ. ಆದರೆ ಕಾಯ್ದೆ ಜಾರಿಯಾಗುವುದು ಖಚಿತ ಎಂದು ಹೇಳಿದರು.