alex Certify BIG NEWS: ಸತತ 11ನೇ ದಿನವೂ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ, ಹೂಡಿಕೆದಾರರಿಗೆ ಬಂಪರ್‌ ಲಾಭ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸತತ 11ನೇ ದಿನವೂ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ, ಹೂಡಿಕೆದಾರರಿಗೆ ಬಂಪರ್‌ ಲಾಭ….!

ಈ ತಿಂಗಳು ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ವಾರದ ಕೊನೆಯ ದಿನವಾದ ಇಂದು ಕೂಡ ಬಿಎಸ್‌ಇ ಸೆನ್ಸೆಕ್ಸ್ ಏರುಗತಿಯಲ್ಲಿತ್ತು. 319.63 ಪಾಯಿಂಟ್‌ಗಳ ಜಿಗಿತದೊಂದಿಗೆ 67,838.63 ಪಾಯಿಂಟ್‌ಗಳಿಗೆ ವಹಿವಾಟನ್ನು ಅಂತ್ಯಗೊಳಿಸಿದೆ. ಈ ಮೂಲಕ ಸತತ 11 ವಹಿವಾಟು ಅವಧಿಗಳಲ್ಲಿ ಸೆನ್ಸೆಕ್ಸ್ 68 ಸಾವಿರದ ಸಮೀಪ ತಲುಪಿದಂತಾಗಿದೆ.

ಮತ್ತೊಂದೆಡೆ ಎನ್‌ಎಸ್‌ಇ ನಿಫ್ಟಿ ಕೂಡ ದಾಖಲೆಯ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿದೆ. ನಿಫ್ಟಿ 5066.85 ಪಾಯಿಂಟ್‌ಗಳಷ್ಟು ಏರಿಕೆಯೊಂದಿಗೆ 20,169.95 ಪಾಯಿಂಟ್‌ಗಳ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿತು. ಈ ತಿಂಗಳು ಅಂದರೆ ಸೆಪ್ಟೆಂಬರ್ 15 ರವರೆಗೆ, 11 ದಿನಗಳ ಕಾಲ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆದಿದೆ. ಈ ಪೈಕಿ ಸೆನ್ಸೆಕ್ಸ್ ಸತತ 11 ದಿನಗಳ ಕಾಲ ಏರಿಕೆ ಕಂಡಿದೆ.

ಈ ವೇಳೆ ಒಂದು ದಿನದ ಮಟ್ಟಿಗೆ ಮಾತ್ರ ನಿಫ್ಟಿ ಅಲ್ಪ ಕುಸಿತ ಕಂಡಿತ್ತು. ಷೇರುಪೇಟೆಯಲ್ಲಿನ ಅದ್ಭುತ ಏರಿಕೆಯಿಂದಾಗಿ ಹೂಡಿಕೆದಾರರು ಬಂಪರ್‌ ಲಾಭ ಮಾಡಿಕೊಳ್ತಿದ್ದಾರೆ. ಹೂಡಿಕೆದಾರರ ಈ ತಿಂಗಳ ಗಳಿಕೆ 33 ಲಕ್ಷ ಕೋಟಿ ರೂಪಾಯಿ. ಸೆಪ್ಟೆಂಬರ್ 1 ರಂದು ಷೇರು ಮಾರುಕಟ್ಟೆ ವಹಿವಾಟು ಪ್ರಾರಂಭವಾದಾಗ ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಕ್ಯಾಪ್ 3,09,59,138.70 ಲಕ್ಷ ಕೋಟಿ ರೂಪಾಯಿ ಇತ್ತು. ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 15ರ ನಡುವಿನ 11 ವಹಿವಾಟು ದಿನಗಳಲ್ಲಿ ಇದು 3,23,20,377.69 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಹೂಡಿಕೆದಾರರು 12.57 ಲಕ್ಷ ಕೋಟಿ ರೂಪಾಯಿಯಷ್ಟು ಗಳಿಕೆ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...