ಸಚಿವ ಈಶ್ವರಪ್ಪ ಪತ್ರಿಕಾಗೋಷ್ಠಿ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನೋನ್ನೊಳ್ ಕರ್, ನಾನು ಮತ್ತು ಸಂತೋಷ್ ಬೈಲಹೊಂಗಲದ ಸ್ವಾಮೀಜಿ ಅವರ ಜೊತೆ ಈಶ್ವರಪ್ಪ ಅವರನ್ನು ಎರಡು ಬಾರಿ ಭೇಟಿಯಾಗಿದ್ದೆವು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
100 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಯ ಜಾತ್ರೆಗೆ 108 ಕಾಮಗಾರಿಗಳನ್ನು ನಡೆಸುವುದಾಗಿ ಪಟ್ಟಿ ತಯಾರಿಸಿಕೊಂಡು ಹೋಗಿದ್ದವು. ಕಾಮಗಾರಿಗಳನ್ನು ಚೆನ್ನಾಗಿ ನಡೆಸಿ ಎಂದು ಈಶ್ವರಪ್ಪನವರು ಸೂಚನೆ ನೀಡಿದ್ದರು ಎಂದು ತಿಳಿಸಿದ್ದಾರೆ.
ಈಶ್ವರಪ್ಪನವರ ಸೂಚನೆ ಮೇರೆಗೆ 4 ಕೋಟಿ ವೆಚ್ಚದಲ್ಲಿ 108 ಕಾಮಗಾರಿಗಳನ್ನು ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ನಡೆಸಿದ ಪತ್ರಿಕಾಗೋಷ್ಟಿ ವೇಳೆ ಸಚಿವ ಈಶ್ವರಪ್ಪ, ತಮಗೆ ಸಂತೋಷ್ ಪಾಟೀಲ್ ಯಾರೆಂದೇ ಗೊತ್ತಿಲ್ಲ. ಆತನ ಮುಖವನ್ನೂ ನಾನು ನೋಡಿಲ್ಲ ಎಂದು ಹೇಳಿದ್ದರು.