ಮೈಸೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಚಿವರು ಹಾಗೂ ಶಾಸಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಸರಾ ಸಂದರ್ಭದಲ್ಲಿ ತನಗೆ ಯಾರೂ ಸಹಕಾರ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ-2022 ಹಿನ್ನೆಲೆಯಲ್ಲಿ ದಸರಾ ಮಹೋತ್ಸವದ ವೇಳೆ ಸಚಿವರಾಗಲಿ, ಶಾಸಕರಾಗಲಿ ತಮಗೆ ಸಹಕಾರ ನೀಡುತ್ತಿಲ್ಲ. ಆದರೆ ನಾನು ಸಹಕಾರ ಸಚಿವನಾಗಿ ಎಲ್ಲರಿಗೂ ಸಹಕರಿಸೋದು ನನ್ನ ಕರ್ತವ್ಯ. ನನಗೆ ಸಹಕಾರ ಕೊಡದವರಿಗೆ ನಾನೇನು ಮಾಡಲಿ ಎಂದು ಬೇಸರ ಹೊರಹಾಕಿದ್ದಾರೆ.
ಆ ತಾಯಿ ಚಾಮುಂಡಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅವರನ್ನು ಆ ತಾಯಿಯೇ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.