ಬೆಂಗಳೂರು: ವಸತಿ ಸಚಿವ ವಿ. ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್. ಅಶೋಕ್, ಇದೊಂದು ಅಚಾನಕ್ ಘಟನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಚಿವ ಸೋಮಣ್ಣ ಒಳ್ಳೆ ಮನಸ್ಸಿನವರು. ಬೇಕಂತ ಹಾಗೆ ಮಾಡಿರಲ್ಲ. ಸೋಮಣ್ಣ ಯಾವತ್ತೂ ಮಹಿಳೆಯರ ಜೊತೆ ಹಾಗೆ ನಡೆದುಕೊಂಡವರಲ್ಲ. ಇದೊಂದು ಅಚಾನಕ್ ಘಟನೆ. ಅಲ್ಲದೇ ಸಚಿವರು ಕ್ಷಮೆ ಯಾಚಿಸಿದ್ದಾರೆ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಚಾಮರಾಜನಗರದಲ್ಲಿ ನಡೆದಿದ್ದ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ವೇಳೆ ಸಚಿವ ಸೋಮಣ್ಣ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿತ್ತು.