ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ವಿಚಾರವಾಗಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಇದೀಗ ಸ್ವಪಕ್ಷೀಯ ನಾಯಕರೇ ತಿರುಗಿಬಿದ್ದಿದ್ದಾರೆ. ದಶಪಥ ರಸ್ತೆ ಕಾಮಗಾರಿ ಪ್ರಧಾನಿ ಮೋದಿ ಸರ್ಕಾರದ ಯೋಜನೆ ಎಂದಿದ್ದ ಪ್ರತಾಪ್ ಸಿಂಹ ಹೇಳಿಕೆಗೆ ಇದೀಗ ಶಾಸಕ ರಾಮದಾಸ್ ಇದು ಯಾರೋ ಒಬ್ಬರಿಗೆ ಸೇರುವ ಕ್ರೆಡಿಟ್ ಅಲ್ಲ, ಇಡೀ ದೇಶಕ್ಕೆ ಸೇರುವ ಕ್ರೆಡಿಟ್ ಎಂದಿದ್ದಾರೆ.
ಹೆದ್ದಾರಿ ನಿರ್ಮಾಣ ಕಾಮಗಾರಿ ಜನರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ಕೆಲಸಗಳು. ಇದು ನಾನು ಮಾಡಿದ್ದು, ಅಥವಾ ಇನ್ನಾರೋ ಒಬ್ಬರ ಯೋಜನೆ ಎಂದು ಹೇಳುವುದು ಸರಿಯಲ್ಲ. ಬೆಂಗಳೂರು-ಮೈಸೂರು ಹೈವೆ ಕ್ರೆಡಿಟ್ ಎಲ್ಲರಿಗೂ ಸೇರಿದ ಅಭಿವೃದ್ಧಿ ಕಾರ್ಯ. ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲೂ ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ.
ನಿಸರ್ಗ ಸೌಂದರ್ಯ ಸವಿಯಲು ರೈಲ್ವೆ ಇಲಾಖೆಯಿಂದ ಟೂರ್ ಪ್ಯಾಕೇಜ್
ಇನ್ನು ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರವಾಗಿ ಮಾತನಾಡಿದ ರಾಮದಾಸ್, ಪಕ್ಷದವರು ಯಾರನ್ನು ಅಭ್ಯರ್ಥಿ ಮಾಡುತ್ತಾರೆ ಅವರಿಗೆ ನಮ್ಮ ಸದಸ್ಯರು ಮತ ಹಾಕುತ್ತಾರೆ. ಪಕ್ಷ ಸೂಚಿಸಿದವರಿಗೆ ನಮ್ಮ ಬೆಂಬಲ ಇರುತ್ತದೆ. ಅಭ್ಯರ್ಥಿ ವಿಚಾರವಾಗಿ ಯಾರು ಯಾರೊಂದಿಗೆ ಮಾತನಾಡಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.