ನವದೆಹಲಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ತೇಜಸ್ವಿ ಸೂರ್ಯ ಅವರಿಗೆ 5 ಪದಗಳನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಓರ್ವ ಸಂಸದರಾಗಿ ತೇಜಸ್ವಿ ಸೂರ್ಯ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ. ಪಾಕಿಸ್ತಾನ, ಮುಸ್ಲಿಂ, ಹಿಂದುತ್ವ, ನರೇಂದ್ರ ಮೋದಿ, ರಾಷ್ಟ್ರೀಯತೆ ಈ 5 ಪದಗಳನ್ನು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ ಎಂದು ಗುಡುಗಿದ್ದಾರೆ.
ಚಳಿಗಾಲದಲ್ಲಿ ಮದ್ಯ ಸೇವೆಯಿಂದ ಉಂಟಾಗಬಹುದು ಹೃದಯಾಘಾತ..! ತಜ್ಞ ವೈದ್ಯರಿಂದ ಮಹತ್ವದ ಮಾಹಿತಿ
ಸಂಸದರಾಗಿ ದ್ವೇಷದ ಭಾಷಣ ಮಾಡುವುದನ್ನು ಮೊದಲು ನಿಲ್ಲಿಸಬೇಕು. ತಮ್ಮದೇ ಕ್ಷೇತ್ರದಲ್ಲಿ ಎರಡು ಬ್ಯಾಂಕ್ ಗಳು ಮುಳುಗಿ ಗ್ರಾಹಕರು ಹಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಜನರಲ್ಲಿ ಒಮ್ಮತದ ಭಾವನೆ ಮೂಡಿಸುವ ಬದಲು ಒಡಕು ಮೂಡಿಸಲು ಹೊರಟಿದ್ದಾರೆ. ಸಂಸದರಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತಾಂತರಗೊಂಡಿರುವ ಮುಸ್ಲಿಂ, ಕ್ರಿಶ್ಚಿಯನ್ನರನ್ನು ಘರ್ ವಾಪಸಿ ಮಾಡಬೇಕು. ಪಾಕಿಸ್ತಾನಕ್ಕೆ ಹೋದವರನ್ನು ವಾಪಸ್ ಕರೆತರಬೇಕು. ಅಖಂಡ ಭಾರತ ಕಲ್ಪನೆಯಲ್ಲಿ ಪಾಕಿಸ್ತಾನವೂ ಇದೆ. ಪಾಕ್ ಮುಸ್ಲಿಂರನ್ನು ಹಿಂದೂಗಳನ್ನಾಗಿ ಪರಿವರ್ತಿಸಬೇಕು. ಮಠ, ದೇವಸ್ಥಾನ ಇದರ ಮುಂದಾಳತ್ವ ವಹಿಸಬೇಕು ಎಂದು ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.